ಡಿ. 5ರಂದು ಶೆಟ್ಟಿಕೊಪ್ಪದಲ್ಲಿ ಎಸ್ ವೈ ಎಸ್ 'ಸಿಸ್ಟೆಕ್ 23'

ಮಂಗಳೂರು: ಸುನ್ನೀ ಯುವಜನ ಸಂಘ (ಎಸ್ ವೈ ಎಸ್) ಇದರ ರಾಜ್ಯ ಮಟ್ಟದ ನಾಯಕತ್ವ ತರಬೇತಿ ಶಿಬಿರ 'ಸಿಸ್ಟೆಕ್ 23' ಚಿಕ್ಕಮಗಳೂರು ಜಿಲ್ಲೆಯ ಶೆಟ್ಟಿಕೊಪ್ಪದಲ್ಲಿ ಡಿ.5ರಂದು ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೇರಳ ರಾಜ್ಯ ಕಾರ್ಯದರ್ಶಿ, ಖ್ಯಾತ ಸಂಘಟನಾ ತಜ್ಞ ಸುಲೈಮಾನ್ ಸಖಾಫಿ ಮಾಳಿಯೇಕಲ್ ಭಾಗವಹಿಸಲಿದ್ದಾರೆ.
ಜಂಇಯತುಲ್ ಉಲಮಾ ಜಿಲ್ಲಾಧ್ಯಕ್ಷ ಸಯ್ಯಿದ್ ಎಪಿಎಸ್ ತಂಙಳ್ ಉದ್ಘಾಟಿಸಲಿದ್ದು, ಹಫೀಳ್ ಸಅದಿ ಮಡಿಕೇರಿ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಹಾಮೀಂ ಅಲ್ ಬುಖಾರಿ, ಸಯ್ಯಿದ್ ಶಾಫಿ ನಈಮಿ ಸಕಲೇಶಪುರ, ಯೂಸುಫ್ ಹಾಜಿ ಉಪ್ಪಳ್ಳಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಕೆ ಎಂ ಮೊಂಟುಗೋಳಿ ತಿಳಿಸಿದ್ದಾರೆ.
Next Story





