ಮುಡಿಪು ಸರಕಾರಿ ಕಾಲೇಜಿನಲ್ಲಿ ಅಬ್ಬಕ್ಕ 500ನೇ ವರ್ಷದ 51ನೇ ಎಸಳು' ಕಾರ್ಯಕ್ರಮ

ಮುಡಿಪು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಮಂಗಳೂರು ವಿಭಾಗದ ಸಹಯೋಗದಲ್ಲಿ ರಾಣಿ ಅಬ್ಬಕ್ಕಳ 500ನೇ ಜಯಂತಿಯ ಪ್ರಯುಕ್ತ 'ಅಬ್ಬಕ್ಕ 500 ವರ್ಷದ 51ನೇ ಎಸಳು' ಕಾರ್ಯಕ್ರಮವು ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆರವೇರಿತು.
ಅಮ್ಮೆಂಬಳ ಸೇವಾ ಸಹಕಾರಿ ಸಂಘದ ಮನೋಹರ್ ಕುರ್ನಾಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ಮೈತ್ರಿ ಭಟ್ ಅಬ್ಬಕ್ಕನ ಜೀವನ ಚರಿತ್ರೆಯನ್ನು, ಅವಳ ಸಾಧನೆಯನ್ನು ವಿಶ್ಲೇಷಿಸಿದರು. ಹಾಗೂ ಅಂತಹ ವ್ಯಕ್ತಿತ್ವ ನಮಗೆ ಮಾರ್ಗದರ್ಶನವನ್ನು ಆದರ್ಶವನ್ನು ನೀಡುತ್ತದೆ ನಾವು ಅವಳನ್ನು ಅನುಸರಿಸಬೇಕು ಹಾಗೂ ತುಳುನಾಡಿನ ವೀರರಾಣಿಯಾದ ಅಬ್ಬಕ್ಕಳ ಚರಿತ್ರೆಯನ್ನು ಅಜರಾಮರವಾಗಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಕವಿತಾ ಎಂ.ಎಲ್. ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ. ಶೇಷಪ್ಪ ಕೆ., ಕಾರ್ಯಕ್ರಮದ ಸಂಯೋಜಕರಾದ ಕಾಜಲ್ ಹಾಗೂ ತನುಜ ಎಂ. ಉಪಸ್ಥಿತರಿದ್ದರು.
ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ಕಾಜಲ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ತನು ಎಂ. ವಂದಿಸಿದರು.





