ಎಸೆಸೆಲ್ಸಿ ಫಲಿತಾಂಶ| ರಾಜ್ಯಕ್ಕೆ 6ನೇ ಸ್ಥಾನಿಯಾಗಿರುವುದು ಖುಷಿ ತಂದಿದೆ: ಮಹಮ್ಮದ್ ಅಯ್ಯನ್

ಉಪ್ಪಿನಂಗಡಿ : ನಾನು ಕಲಿತ ಶಾಲೆ , ನನ್ನ ಗುರುಗಳ ಮತ್ತು ಹೆತ್ತವರ ಪ್ರೋತ್ಸಾಹ ನನ್ನನ್ನು ನಿರಂತರ ಕಲಿಕೆಯಲ್ಲಿ ಆಸಕ್ತಿ ತಾಳುವಂತೆ ಮಾಡಿತ್ತು ಮಹಮ್ಮದ್ ಅಯ್ಯನ್ ಪ್ರತಿಕ್ರಿಯಿಸಿದ್ದಾರೆ.
ಕಳೆದ ಜನವರಿ ತಿಂಗಳಿಂದ ನಿರಂತರ ಪುನರಾವರ್ತನೆ , ಹಳೇ ಪ್ರಶ್ನಾಪ್ರತಿಕೆಗಳ ಬಗ್ಗೆ ಗಮನ ನೀಡುವಂತೆ ಮಾಡುತ್ತಿದ್ದ ಇಂದ್ರಪ್ರಸ್ಥ ವಿದ್ಯಾಲಯದಿಂದಾಗಿ ನನಗೆ ರಾಜ್ಯ ಮಟ್ಟದಲ್ಲಿ 6 ನೇ ಸ್ಥಾನಿಯಾಗಿ ಮೂಡಿಬರಲು ಸಾಧ್ಯವಾಗಿದೆ. ಮನೆಯಲ್ಲಿ ನನ್ನ ಅಮ್ಮ ನೀಡುತ್ತಿದ್ದ ಸಹಾಯ ಸಹಕಾರ ಕಲಿಕೆಯನ್ನು ಸುಲಲಿತಗೊಳಿಸಿತ್ತು. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳಲಿದ್ದೇನೆ ಎಂದು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಪೆರ್ನೆಯ ಅಬ್ದುಲ್ ಜಬ್ಬಾರ್ –ಅಬೀಬಾ ದಂಪತಿಯ ಮಗನಾದ ಮಹಮ್ಮದ್ ಅಯ್ಯನ್ ಪ್ರತಿಕ್ರಿಯಿಸಿದ್ದಾರೆ.
Next Story





