ಮೇ 7: ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಬಿಡುಗಡೆ

ಮಂಗಳೂರು, ಮೇ 4: ಮಲಾರ್ ಅರಸ್ತಾನದ ಮದ್‌ರ ಪ್ರಕಾಶನ ಪ್ರಕಟಿಸಿದ ಪತ್ರಕರ್ತ ಹಂಝ ಮಲಾರ್ ಬ್ಯಾರಿ ಭಾಷೆಯಲ್ಲಿ ಬರೆದ ಱಫೇಸ್‌ಬುಕ್ (ಕಥಾ ಸಂಕಲನ), ಬಿಂದಾಸ್ (ನಾಟಕ ಸಂಕಲನ), ಪಾಲುಂ-ಬಾಲೆ (ಅಂಕಣ ಬರಹಗಳ ಸಂಕಲನ) ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವು ಮೇ 7ರಂದು ಸಂಜೆ 4ಕ್ಕೆ ನಗರದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ದೇರ್ಲಕಟ್ಟೆಯ ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾರಿ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಮೇಲ್ತೆನೆಯ ಅಧ್ಯಕ್ಷ ಹಾಜಿ ವಿ. ಇಬ್ರಾಹಿಂ ನಡುಪದವು, ಬ್ಯಾರಿವಾರ್ತೆಯ ಉಪಸಂಪಾದಕ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಮದನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಹಿರಿಯ ಸಾಹಿತಿ ಅಬ್ದುಲ್ ರಹ್‌ಮಾನ್ ಕುತ್ತೆತ್ತೂರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





