ದ.ಕ. ಜಿಲ್ಲೆ: ಎಸೆಸೆಲ್ಸಿಯಲ್ಲಿ 7 ಮಂದಿಗೆ ತಲಾ 624 ಅಂಕ

ಮಂಗಳೂರು, ಮೇ 2: ದ.ಕ. ಜಿಲ್ಲೆಯ ಏಳು ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿಯಲ್ಲಿ ಪರೀಕ್ಷೆಯಲ್ಲಿ ತಲಾ 624 ಅಂಕಗಳನ್ನು ಗಳಿಸಿದ್ದು, ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಸುಳ್ಯ ಜೂನಿಯರ್ ಕಾಲೇಜಿನ ಸ್ರುಜನಾದಿತ್ಯ ಶೀಲಾ ಕೆ., ಮಂಗಳೂರು ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ಶ್ರೀಲಕ್ಷ್ಮಿ ಬಿ. ಪೈ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ ಎಲ್., ಸುಲ್ಯದ ಭಗವಾನ್ ಸತ್ಯಸಾಯಿ ಎಚ್‌ಎಸ್‌ಶಾಲೆಯ ಕುನಾಲ್ ರವಿತೇಜ್, ಪುತ್ತೂರು ಕಾಣಿಯೂರಿನ ಪ್ರಗತಿ ಹೈಸ್ಕೂಲ್‌ನ ಹಂಸಿಕಾ, ಸುಳ್ಯ ಬ್ಲೆಸ್ಡ್ ಕುರಿಯಾಕೋಸ್ ಹೈಸ್ಕೂಲ್‌ನ ಕೆ.ಜಿ. ಚಿರಸ್ವಿ, ಮೂಡಬಿದ್ರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಸಾನ್ನಿಧ್ಯ ರಾವ್ ತಲಾ 624 ಅಂಕಗಳನ್ನು ಗಳಿಸಿದ್ದಾರೆ.
ದ.ಕ: 148 ಶಾಲೆಗಳಿಗೆ ಶೇ. 100 ಫಲಿತಾಂಶ
ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯ ಒಟ್ಟು 148 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಬಂಟ್ವಾಳ ಮತ್ತು ಮಂಗಳೂರು ದಕ್ಷಿಣದ ತಲಾ 22 ಶಾಲೆಗಳು, ಬೆಳ್ತಂಗಡಿ, ಮಂಗಳೂರು ಉತ್ತರದ ತಲಾ 27 ಶಾಲೆಗಳು, ಮೂಡಬಿದಿರೆಯ 8, ಪುತ್ತೂರಿನ 29, ಸುಳ್ಯದ 13 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ.
ಸರಕಾರಿ ಶಾಲೆಗಳಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಶೇ 87.56 ಫಲಿತಾಂಶ ದಾಖಲಾಗಿದೆ. ಸರಕಾರಿ ಶಾಲೆಗಳಿಂದ ಪರೀಕ್ಷೆ ಬರೆದ ಒಟ್ಟು 8507 ವಿದ್ಯಾರ್ಥಿಗಳಲ್ಲಿ 7449 ವಿದ್ಯಾರ್ಥಿಗಳು ಉತ್ತೀರ್ಣರಾ ಗಿದ್ದಾರೆ. ಬಂಟ್ವಾಳದಲ್ಲಿ ಶೇ. 84.27, ಬೆಳ್ತಂಗಡಿಯಲ್ಲಿ ಶೇ. 92.67, ಮಂಗಳೂರು ಉತ್ತರದಲ್ಲಿ ಶೇ. 86.23, ಮಂಗಳೂರು ದಕ್ಷಿಣದಲ್ಲಿ ಶೇ. 82.06, ಮೂಡಬಿದ್ರೆಯಲ್ಲಿ ಶೇ. 87.46, ಪುತ್ತೂರಿನಲ್ಲಿ ಶೇ. 90.87 ಹಾಗೂ ಸುಳ್ಯದ ಸರಕಾರಿ ಶಾಲೆಗಳಲ್ಲಿ ಶೇ. 87.45 ಫಲಿತಾಂಶ ದಾಖಲಾಗಿದೆ.
ಅನುದಾನಿತ ಶಾಲೆಗಳಿಗೆ ಸಂಬಂಧಿಸಿ ಜಿಲ್ಲೆಯಲ್ಲಿ ಶೇ. 89.76 ಫಲಿತಾಂಶ ದಾಖಲಾಗಿದೆ. ಅನುದಾನ ರಹಿತ ಶಾಲೆಗಳಿಂದ ಒಟ್ಟು 7360 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರೆ, 6849 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಂಟ್ವಾಳದಲ್ಲಿ ಶೇ. 85.02, ಬೆಳ್ತಂಗಡಿ ಶೇ. 88.17, ಮಂಗಳೂರು ಉತ್ತರ ಶೇ. 90.78, ಮಂಗಳೂರು ದಕ್ಷಿಣ ಶೇ. 90.05, ಮೂಡಬಿದ್ರೆಯಲ್ಲಿ ಶೇ. 87.07, ಪುತ್ತೂರಿನಲ್ಲಿ ಶೇ. 93.29, ಸುಳ್ಯದಲ್ಲಿ ಶೇ. 91.91 ಫಲಿತಾಂಶ ದಾಖಲಾಗಿದೆ.
ಅನುದಾನರಹಿತ ಶಾಲೆಗಳಲ್ಲಿ ಜಿಲ್ಲೆಯಲ್ಲಿ ಶೇ. 94.59 ಫಲಿತಾಂಶ ದಾಖಲಾಗಿದ್ದು, ಪರೀಕ್ಷೆ ಬರೆದ 11659 ವಿದ್ಯಾರ್ಥಿಗಳಲ್ಲಿ 11028 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಂಟ್ವಾಳ ಶೇ. 92.21, ಬೆಳ್ತಂಗಡಿ 95.76, ಮಂಗಳೂರು ಉತ್ತರದಲ್ಲಿ ಶೇ. 94.23, ಮಂಗಳೂರು ದಕ್ಷಿಣದಲ್ಲಿ ಶೇ. 92.07, ಮೂಡಬಿದ್ರೆಯಲ್ಲಿ 97.55, ಪುತ್ತೂರಿನಲ್ಲಿ ಶೇ. 96.89, ಸುಳ್ಯದಲ್ಲಿ 98.59 ಫಲಿತಾಂಶ ದಾಖಲಾಗಿವೆ.