Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಕರ್ಣಾಟಕ ಬ್ಯಾಂಕ್‍ಗೆ ರೂ. 736.40 ಕೋಟಿ...

ಕರ್ಣಾಟಕ ಬ್ಯಾಂಕ್‍ಗೆ ರೂ. 736.40 ಕೋಟಿ ನಿವ್ವಳ ಲಾಭ

ವಾರ್ತಾಭಾರತಿವಾರ್ತಾಭಾರತಿ23 Oct 2024 7:15 PM IST
share
ಕರ್ಣಾಟಕ ಬ್ಯಾಂಕ್‍ಗೆ ರೂ. 736.40 ಕೋಟಿ ನಿವ್ವಳ ಲಾಭ

ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಮೊದಲ ಅರ್ಧ ವರ್ಷದಲ್ಲಿ 736.40 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದ ರೂ. 700.96 ಕೋಟಿಗೆ ಹೋಲಿಸಿದರೆ ನಿವ್ವಳ ಲಾಭವು ಶೇಕಡ 5.06 ರಷ್ಟು ಸುಧಾರಿಸಿದೆ.

ಮಂಗಳೂರಿನಲ್ಲಿ ಇಂದು ನಡೆದ ಆಡಳಿತ ನಿರ್ದೇಶಕರ ಮಂಡಳಿಯ ಸಭೆಯಲ್ಲಿ, ಮಂಡಳಿಯು 2024ರ ಸೆ.30 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ಆರ್ಥಿಕ ಫಲಿತಾಂಶಗಳನ್ನು ಅನುಮೋದಿಸಿದೆ. ಇದಲ್ಲದೆ, ಸೆಪ್ಟೆಂಬರ್ 2023 ರಲ್ಲಿ ಇದ್ದ 330.26 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಸೆಪ್ಟೆಂಬರ್ 2024 ಕ್ಕೆ ಕೊನೆಗೊಂಡ ತ್ರೈಮಾಸಿಕ ದಲ್ಲಿ ನಿವ್ವಳ ಲಾಭವು ರೂ 336.07 ಕೋಟಿಯಷ್ಟಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್ 2024 ಕ್ಕೆ ಕೊನೆಗೊಳ್ಳುವ ಅರ್ಧ ವರ್ಷದಲ್ಲಿ, ನಿವ್ವಳ ಬಡ್ಡಿ ಆದಾಯವು ಶೇಕಡ 6.10 ರಷ್ಟು ಏರಿಕೆಯಾಗಿದ್ದು, 1,637.09 ಕೋಟಿಗಳಿಂದ ರೂ 1,736.92 ಕೋಟಿಗಳಿಗೆ ತಲುಪಿದೆ. ಎನ್‍ಪಿಎ ಪ್ರಮಾಣ ಮತ್ತಷ್ಟು ಮಂದವಾಗಿದ್ದು, ಜಿಎನ್‍ಪಿಎ ಶೇಕಡ 3.21ಕ್ಕೆ ಇಳಿದಿದೆ. 30/06/24 ರ ವೇಳೆಗೆ ಇದು ಶೇಕಡ 3.54 ರಷ್ಟಿತ್ತು. ಅಂತೆಯೇ ಎನ್‍ಎನ್‍ಪಿಎ ಕೂಡಾ ಶೇಕಡ 1.46ಕ್ಕೆ ಇಳಿಕೆಯಾಗಿದ್ದು, 30/06/24 ಇದು ಶೇಕಡ 1.66 ರಷ್ಟಿತ್ತು. ಸುಮಾರು ಒಂದು ವರ್ಷದ ಹಿಂದೆ, ಅಂದರೆ 30/09/2023 ಕ್ಕೆ ಜಿಎನ್‍ಪಿಎ ಶೇಕಡ 3.47 ಮತ್ತು ಎನ್‍ಎನ್‍ಪಿಎ ಶೇಕಡ 1.36 ರಷ್ಟಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು 2025ರ 2ನೇ ತ್ರೈಮಾಸಿಕದ ವೇಳೆಗೆ 1,75,284.08 ಕೋಟಿಗಳಾಗಿವೆ (ಒಟ್ಟು ಆಧಾರದ ಮೇಲೆ). 2024ರ 2ನೇ ತ್ರೈಮಾಸಿಕದಲ್ಲಿ ಈ ಪ್ರಮಾಣ 1,56,467.71 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 12.03 ಬೆಳವಣಿಗೆಯನ್ನು ದಾಖಲಿಸಿದೆ. ಬ್ಯಾಂಕಿನ ಒಟ್ಟು ಠೇವಣಿಗಳು 2025ರ 2ನೇ ತ್ರೈಮಾಸಿಕದ ವೇಳೆಗೆ 99,967.99 ಕೋಟಿ ರೂಪಾಯಿ ಆಗಿದ್ದು, 2024ರ 2ನೇ ತ್ರೈಮಾಸಿಕದಲ್ಲಿ ಇದ್ದ 89,531.73 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಶೇಕಡ 11.66 ಹೆಚ್ಚಳ ದಾಖಲಿಸಿದೆ. (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉದ್ಯಮ ಪ್ರಗತಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಶೇಕಡ 12ರಷ್ಟಿದೆ). ಬ್ಯಾಂಕ್‍ನ ಒಟ್ಟು ಮುಂಗಡಗಳು 2025ರ 2ನೇ ತ್ರೈಮಾಸಿಕದಲ್ಲಿ 75,316.09 ಕೋಟಿ ರೂಪಾಯಿಗಳಾಗಿದ್ದು, 2024ರ 2ನೇ ತ್ರೈಮಾಸಿಕ ದಲ್ಲಿ ಇದ್ದ 66,935.98 ಕೋಟಿ ರೂ.ಗಳಿಗೆ ಹೋಲಿಸಿದರೆ, ಶೇಕಡ 12.52 ಪ್ರಗತಿ ದಾಖಲಿಸಿದೆ. (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಉದ್ಯಮ ಪ್ರಗತಿ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಶೇಕಡ 13ರಷ್ಟಿದೆ). 2024ರ ಎರಡನೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ, ಬ್ಯಾಂಕಿನ ಚಿಲ್ಲರೆ ಮುಂಗಡ ಪ್ರಮಾಣ 2025ರ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡ 12.2ರಷ್ಟು ಪ್ರಗತಿ ದಾಖಲಿಸಿದೆ. ಬ್ಯಾಂಕಿನ ಸಿಡಿ ಅನುಪಾತ (ಒಟ್ಟು) ಶೇಕಡ 75.34 ರಷ್ಟಿದೆ ಎಂದು ಪ್ರಕಟಣೆ ವಿವರಿಸಿದೆ.

ಬ್ಯಾಂಕಿನ ಬಂಡವಾಳ ಸಮರ್ಪಕತೆಯ ಅನುಪಾತವು ಶೇಕಡ 17.58 ರಷ್ಟಿದ್ದು, 30-09-2023ಕ್ಕೆ ಇದು ಶೇಕಡ 16.20 ರಷ್ಟಾಗಿತ್ತು. ಭಾರತೀಯ ರಿಸರ್ವ್ ಬ್ಯಾಂಕಿನ ಪರಿಷ್ಕøತ ಕರಡು ಮಾರ್ಗಸೂಚಿಗಳಿಗೆ ಅನುಸಾರವಾಗಿ ಲಿಕ್ವಿಡಿಟಿ ಕವರೇಜ್ ಅನುಪಾತದ (ಎಲ್‍ಸಿಆರ್) 30ನೇ ಸೆಪ್ಟೆಂಬರ್ 2024ರ ವೇಳೆಗೆ ಶೇಕಡ 100 ರ ಶಾಸನಬದ್ಧ ಗುರಿಗೆ ಪ್ರತಿ ಯಾಗಿ ಶೇಕಡ 143.93 ರಷ್ಟು ಆಗಿದೆ. ನಿವ್ವಳ ಬಡ್ಡಿಯ ಮಾರ್ಜಿನ್ ಪ್ರಮಾಣ 30/09/2023 ಕ್ಕೆ ಹೋಲಿಸಿದರೆ ಶೇ. 3.65 ರಿಂದ ಶೇಕಡ 3.38 ಕ್ಕೆ ಕಡಿಮೆಯಾಗಿದೆ.

"ಕರ್ಣಾಟಕ ಬ್ಯಾಂಕ್ 2025ನೇ ಹಣಕಾಸು ವರ್ಷದ 2ನೇ ತ್ರೈಮಾಸಿಕದಲ್ಲಿ ಪುಸ್ತಕದ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಚಿಲ್ಲರೆ ವಿಭಾಗದಲ್ಲಿ ಬೆಳವಣಿಗೆಯೊಂದಿಗೆ ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ, ಅದು ಮುಂದೆ ಇನ್ನಷ್ಟು ದೃಢವಾಗಲಿದೆ. ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ, ವರ್ಷದ ಉಳಿದ ಅವಧಿಯ ಬೆಳವಣಿಗೆಯ ಪಥವನ್ನು ಬ್ಯಾಂಕ್ ವ್ಯಾಖ್ಯಾನಿಸಿದೆ ಮತ್ತು ನಮ್ಮ ಗುರಿಗಳನ್ನು ಸಾಧಿಸುವ ವಿಶ್ವಾಸವಿದೆ ಮತ್ತು ನಮ್ಮ ಪರಿವರ್ತಕ ಪ್ರಯಾಣವು ಹೆಚ್ಚು ಸೆಳೆತವನ್ನು ಪಡೆಯುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ನಾವು ಉತ್ತಮ ಫಲಿತಾಂಶಗಳನ್ನು ನೋಡುತ್ತೇವೆ" ಎಂದು ಹೇಳಿದ್ದಾರೆ.

ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶೇಖರ್ ರಾವ್ ಮಾತನಾಡಿ, "25ನೇ ಹಣಕಾಸು ವರ್ಷದ 2ನೇ ತ್ರೈಮಾಸಿದ ಕಾರ್ಯಕ್ಷಮತೆಯಿಂದ ನಾವು ಸಂತಸಗೊಂಡಿದ್ದೇವೆ, ಕ್ರೋಢೀಕರಣ ಮತ್ತು ಎನ್‍ಪಿಎ ಮತ್ತು ಜಾರುವಿಕೆ ಮೇಲಿನ ನಿಯಂತ್ರಣ ಮತ್ತಷ್ಟು ಸುಧಾರಿಸಿದೆ. ಅಪಾಯ ನಿರ್ವಹಣೆಯನ್ನು ಬಲಪಡಿಸುವುದು ಒಂದು ಪ್ರಮುಖ ಗಮನವಾ ಗಿದೆ. ಇದು ಉತ್ತಮ ಆಸ್ತಿ ಗುಣಮಟ್ಟಕ್ಕೆ ಕಾರಣವಾಗುತ್ತದೆ ಎಂದು ವಿವರಿಸಿದರು.

ನಮ್ಮ ಡಿಜಿಟಲ್ ಉಪಕ್ರಮಗಳು ಗಮನಾರ್ಹ ಪ್ರಗತಿಯನ್ನು ಸಾಧಿಸಿವೆ, ಗ್ರಾಹಕರ ಅನುಭವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಿವೆ. ಈ ಹಂತಗಳು ಭವಿಷ್ಯದ ಬೆಳವಣಿಗೆಗೆ ನಮಗೆ ಉತ್ತಮ ಸ್ಥಾನವನ್ನು ನೀಡಿದೆ. 25 ನೇ ಹಣ ಕಾಸು ವರ್ಷದ ಉಳಿದ ಭಾಗ ನಮ್ಮ ಮುಂದಿದ್ದು, ಈ ಆವೇಗವನ್ನು ಕಾಪಾಡಿಕೊಳ್ಳಲು, ತಂತ್ರಜ್ಞಾನದ ಮೂಲಕ ಬೆಳವಣಿ ಗೆಗೆ ಚಾಲನೆ ಮಾಡಲು ಮತ್ತು ಬಲವಾದ ಹಾಗೂ ಸ್ಥಿರವಾದ ಬ್ಯಾಲೆನ್ಸ್ ಶೀಟ್ ಅನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದಿರುವುದಾಗಿ ಪ್ರಕಟಣೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X