ಪ.ಪೂ. ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ಆಳ್ವಾಸ್ ಕಾಲೇಜಿಗೆ 8 ಪದಕ

ಮೂಡುಬಿದಿರೆ : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ,(ಪದವಿಪೂರ್ವ) ಧಾರವಾಡ ಇದರ ಸಂಯುಕ್ತ ಆಶ್ರಯದಲ್ಲಿ ನವಂಬರ್ 28 ಹಾಗೂ 29 ರಂದು ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 4 ಚಿನ್ನ, 2 ಬೆಳ್ಳಿ ಮತ್ತು 2 ಕಂಚಿನ ಪದಕಗಳೊಂದಿಗೆ 8 ಪದಕಗಳನ್ನು ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ರೀತುಶ್ರೀ-200ಮೀ, 400ಮೀ(ಪ್ರಥಮ), 4*400ಮೀ ರಿಲೇ(ದ್ವಿತೀಯ), 4*100ಮೀ ರಿಲೇ(ತೃತೀಯ), ಐಶ್ವರ್ಯ-ಗುಂಡು ಎಸೆತ (ಪ್ರಥಮ), ಚಕ್ರ ಎಸೆತ(ದ್ವಿತೀಯ), ಅಂಬಿಕಾ- 5ಕಿಮೀ ನಡಿಗೆ(ಪ್ರಥಮ), ಚೈತ್ರಾ-800ಮೀ(ತೃತೀಯ), ಗುಡ್ಡಗಾಡು ಓಟ(ನಾಲ್ಕನೇ ಸ್ಥಾನ), ಲಹರಿ-4*400ಮೀ ರಿಲೇ(ದ್ವಿತೀಯ), ಶಬರಿ-4*400ಮೀ ರಿಲೇ(ದ್ವಿತೀಯ), ರೇಖಾ-4*400ಮೀ ರಿಲೇ(ದ್ವಿತೀಯ), 4*100ಮೀ ರಿಲೇ(ತೃತೀಯ), ಜೊಬಿನಾ- 4*100ಮೀ ರಿಲೇ(ತೃತೀಯ)
Next Story





