ಎಸ್‌ಐ-8 ಫೌಂಡೇಶನ್‌ನಿಂದ ಬೀಚ್ ಸ್ಟಾರ್ಟ್ ಅಪ್ ಉತ್ಸವ

ಮಂಗಳೂರು, ಫೆ.8: ಸೆಕ್ಷನ್ ಇನ್ಫಿನ್-8 ಫೌಂಡೇಶನ್(ಎಸ್‌ಐ-8) ಹಾಗೂ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಸಹಭಾಗಿತ್ವದಲ್ಲಿ ‘ಸಿಲಿಕಾನ್ ಬೀಚ್ ಆಫ್ ಭಾರತ’ ಎಂಬ ವಿಷಯದೊಂದಿಗೆ ಭಾರತದ ಮೊದಲ ಬೀಚ್ ಸ್ಟಾರ್ಟ್‌ಅಪ್ ಉತ್ಸವನ್ನು ಆಯೋಜಿಸಲಾಗುತ್ತಿದೆ ಎಂದು ಸೆಕ್ಷನ್ ಇಂಫೈನ್ 8 ಫೌಂಡೇಶನ್‌ನ ಸ್ಥಾಪಕ ನಿರ್ದೇಶಕ ವಿಶ್ವಾಸ್ ಯು.ಎಸ್.ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಶೈಕ್ಷಣಿಕ, ಉದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಇವುಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಪರಿವರ್ತಕ ಪ್ರಯತ್ನದಲ್ಲಿ ವಿಷನ್ ಉತ್ಥಾನ್ ಅನ್ನು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ. ಈ ಉಪಕ್ರಮವು ಶ್ರೇಣಿ 2 ಮತ್ತು ಶ್ರೇಣಿ 3 ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಜೊತೆಗೆ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಸಮಗ್ರ ಪ್ರಗತಿಯನ್ನು ಬೆಳೆಸುತ್ತದೆ ಎಂದವರು ಹೇಳಿದರು.
ಭಾರತದ ಉನ್ನತ ಮಟ್ಟದ ಸಂಸ್ಥೆಗಳು ನಾವೀನ್ಯತೆಯ ಮುಂಚೂಣಿಯಲ್ಲಿದ್ದರೂ ನಿಜವಾದ ರಾಷ್ಟ್ರೀಯ ಪ್ರಗತಿಗೆ ಎಲ್ಲರನ್ನೂ ಒಗ್ಗೂಡಿಸುವ ವಿಧಾನದ ಅಗತ್ಯವಿದೆ. ಈ ಅಂತರವನ್ನು ಕಡಿಮೆ ಮಾಡಲು ಧೀರ್ಘಾವಧಿಯ ಸಾಮಾಜಿಕ-ಆರ್ಥಿಕ ಪರಿಣಾಮವನ್ನು ಉಂಟುಮಾಡುವ ಔದ್ಯಮಿಕ ಪಾಲುದಾರಿಕೆಗಳು, ಸಂಸ್ಥೆಗಳ ಸಂಶೋಧನಾ ಸಂಬಂಧ ವ್ಯವಸ್ಥೆಯನ್ನು ಹೆಚ್ಚಿಸಲು ಮಿಷನ್ ಉತ್ಥಾನ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೆಕ್ಷನ್ ಇಂಫೈನ್ 8 ಫೌಂಡೇಶನ್ ಸಿಇಒ ಅರವಿಂದ ಸಿ ಕುಮಾರ್, ಪ್ರಮುಖರಾದ ಸೌಜನ್ಯ ಬಿ., ಪ್ರೇಕ್ಷಾ ತೇಜ್, ಹರ್ನಿಶ್ ರಾಜ್ ಉಪಸ್ಥಿತರಿದ್ದರು.