ಬಂಗಾರದ ಉದ್ಯಮದಲ್ಲಿ 80 ವರ್ಷದ ಪರಂಪರೆಯನ್ನು ಹೊಂದಿರುವ ಮುಳಿಯ ಸಂಸ್ಥೆಯ ಬಗ್ಗೆ ಖುಷಿಯಿದೆ: ಚಿತ್ರನಟ ರಮೇಶ್ ಅರವಿಂದ್
►ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆಯ ನವೀಕೃತ ಮಳಿಗೆಯ ಲೋಕಾರ್ಪಣೆ ►ಮುಳಿಯ ಆರಂಭೋತ್ಸವ

ಪುತ್ತೂರು: ಸಂಪಾದನೆಯೆಂದರೆ ಹಣ ಮಾತ್ರವಲ್ಲ, ವ್ಯಕ್ತಿಯ ಕೌಶಲ್ಯ, ಗುಣ ನಡತೆ, ಸಂವಹನ ಶೀಲನೆ, ಶಿಸ್ತು ಎಲ್ಲವೂ ಒಟ್ಟಾಗಿ ಸಂಪಾಯನೆಯಾಗಿದೆ. ಕಡಿಮೆಯಾಗುತ್ತಿರುವ ದುಡ್ಡಿನ ಮೌಲ್ಯವನ್ನು ಸರಿದೂಗಿಸುವ ಶಕ್ತಿ ಚಿನ್ನಕ್ಕಿದ್ದು, ಅದರಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿದೆ. ಬಂಗಾರದ ಉದ್ಯಮದಲ್ಲಿ 80 ವರ್ಷದ ಪರಂಪರೆಯನ್ನು ಮುಳಿಯ ಸಂಸ್ಥೆಯು ಹೊಂದಿರುವುದಕ್ಕೆ ಖುಷಿಯಿದೆ. ಮುಳಿಯ ಸಂಸ್ಥೆಯಲ್ಲಿ ಕ್ರೀಯಾಶೀಲತೆ ಮತ್ತು ಸಂತೋಷ ಒಳಗೊಂಡಿದೆ, ಇಲ್ಲದಿದ್ದಲ್ಲಿ ಸಂಸ್ಥೆಯು 81 ವರ್ಷಗಳ ಸುದೀರ್ಘ ಕಾಲ ಉಳಿಯಲು ಸಾಧ್ಯ ಇರುತ್ತಿರಲಿಲ್ಲ. ತನ್ನ ಪರಂಪರೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವ ಈ ಸಂಸ್ಥೆ ಪ್ರಸ್ತುತ ವ್ಯವಹಾರವನ್ನು 5 ಸಾವಿರ ಕೋಟಿಗೆ ವಿಸ್ತರಿಸುವ ಕನಸು ಹೊಂದಿದೆ. ಈ ಕನಸು ಅತಿ ಶೀಘ್ರ ನನಸಾಗಲಿ ಎಂದು ಖ್ಯಾತ ಚಿತ್ರನಟ ಹಾಗೂ ಮುಳಿಯ ಚಿನ್ನದ ಸಂಸ್ಥೆಯ ಬ್ರಾಂಡ್ ರಾಯಭಾರಿಯಾಗಿರುವ ಚಿತ್ರನಟ ರಮೇಶ್ ಅರವಿಂದ್ ಅಭಿಪ್ರಾಯಪಟ್ಟರು.
ಅವರು ರವಿವಾರ ಪುತ್ತೂರು ನಗರದ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ಸಂಸ್ಥೆಯ ನವೀಕೃತ ಮಳಿಗೆಯ ಲೋಕಾರ್ಪಣೆ ಹಾಗೂ ಮುಳಿಯ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂತೋಷವನ್ನು ಸೃಷ್ಟಿಸುವ ಗುಣ ಬಳ ಮುಖ್ಯವಾಗಿದ್ದು, ನಮ್ಮೊಳಗೇ ಸಂತೋಷ ಸಿಗುವ ಕಾರ್ಯವಾಗ ಬೇಕಾಗಿದೆ. ಕರಾವಳಿ ಭಾಗದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಶ್ಲೋಗನ್, ಫಿಲಾಸಫಿ ಹಾಗೂ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಹೋದರರ ಸಂಸ್ಕೃತಿಗೆ ಮಾರುಹೋಗಿ ಮುಳಿಯ ಸಂಸ್ಥೆಯ ರಾಯಭಾರಿಯಾಗಿದ್ದೇನೆ. ನಮ್ಮ ಸಂಪಾದನೆಯ ಒಂದು ಭಾಗವನ್ನು ಚಿನ್ನದ ಮೂಲಕ ಉಳಿತಾಯ ಮಾಡುವುದು ಹೆಚ್ಚು ಶ್ರೇಯಸ್ಕರ ಎಂಬ ಚಿಂತನೆ ನಮ್ಮಲ್ಲಿ ಹೆಚ್ಚಾಗಬೇಕು. ಬದುಕಿನಲ್ಲಿ ಸಂತೋಷವನ್ನು ಎಲ್ಲೆಲ್ಲೋ ಹುಡುಕಬೇಕಾಗಿಲ್ಲ. ಸಂತೋಷ ನಮ್ಮ ಒಳಗೇ ಇದೆ. ಅದನ್ನು ಅರ್ಥಮಾಡಿಕೊಳ್ಳುವ ಯೋಚನೆ ಮಾಡಬೇಕಾಗಿದೆ. ಎಲ್ಲರನ್ನೂ ಪ್ರೀತಿಸುವ ಹಾಗೂ ಸಹಬಾಳ್ವೆಯ ಬದುಕನ್ನು ಮುಳಿಯ ಸಂಸ್ಥೆ ತನ್ನ ಚಿನ್ನದ ಮಳಿಗೆಯಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಲಿದೆ ಎಂದರು.
ಮುಳಿಯ ಸಂಸ್ಥೆಯ ಚೇರ್ಮೆನ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ 81 ವರ್ಷಗಳ ಹಿಂದೆ ಕಟ್ಟೆಯಲ್ಲಿ ಆರಂಭಗೊಂಡಿದ್ದ ಮುಳಿಯ ಸಂಸ್ಥೆ ಇದೀಗ ತನ್ನ ಪಾರಂಪರಿಕ ವ್ಯವಸ್ಥೆಯೊಂದಿಗೆ ಹೊಸ ತನಕ್ಕೆ ತೆರೆದುಕೊಂಡಿದೆ. ಮುಳಿಯ ಸಂಸ್ಥೆ ಎಂಬುವುದು ಗ್ರಾಹಕರ ದೇಗುಲವಾಗಿದ್ದು, ಈ ಸಂಸ್ಥೆಗೊಂದು ವ್ಯಕ್ತಿತ್ವ ಇರುವ ಬ್ರಾ್ಯಂಡ್ ಇದೆ. ಗ್ರಾಹಕರಿಗೆ ನಷ್ಟವಾಗಬಾರದು ಎಂಬುವುದೇ ಮುಳಿಯ ಸಂಸ್ಥೆಯ ಪ್ರಮುಖ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ ಮಳಿಗೆಗಳಿಗೆ ಇನ್ನೊಂದಷ್ಟು ಮಳಿಗೆಗಳ ಹೆಚ್ಚ ಳಕ್ಕೆ ಆದ್ಯತೆ ನೀಡಲಾಗುವುದು. ಹಾಗಾಗಿ ಸಂಸ್ಥೆಯ ಮಳಿಗೆಗಳನ್ನು ಆಕರ್ಷಣೀಯವಾಗಿ ಗ್ರಾಹಕರ ಆಶಯಗಳಿಗೆ ತಕ್ಕಂತೆ ರೂಪಾಂತರ ಮಾಡಲಾಗಿದೆ ಎಂದರು.
ಮುಳಿಯ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ ಹಿಂದೆ ಈ ಸಂಸ್ಥೆ ಮನೆಮನೆಗೆ ಹೋಗಿ ಚಿನ್ನ ಮಾರಾಟ ಮಾಡುತ್ತಿತ್ತು. ಈ ಸ್ಥಿತಿಯಿಂದ ಬೆಳೆದು ಇಂದು ಆಧುನಿಕ ನೆಲೆ ಯಲ್ಲಿ ಚಿನ್ನದ ಮಳಿಗೆಯ ತನಕ ಸ್ಥಿತ್ಯಂತರ ಹೊಂದಿದೆ. ನಮ್ಮ ಗ್ರಾಹಕರಿಗೆ ನಮ್ಮ ಚಿನ್ನದ ಮಳಿಗೆಗಳು ಪ್ರಯೋಜನವಾಗುವಂತಹ ಆಯ್ಕೆಯ ಸ್ಥಳವಾಗಬೇಕು ಹಾಗೂ ಅವರಿಗೆ ಸಂತೋಷ ದೊರಕಬೇಕು ಎಂಬುವುದು ನಮ್ಮ ಆಶಯ. ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ರಾಯಭಾರಿಯಾಗಿರುವ ರಮೇಶ್ ಅರವಿಂದ್ ಸಮಾಜಕ್ಕೆ ಒಳಿತನ್ನು ಬಯಸುವವರು. ಮುಳಿಯ ಸಂಸ್ಥೆಯೂ ಅದನ್ನೇ ಬಯಸು ತ್ತಿದೆ. ಹಾಗಾಗಿ ಎರಡು ವ್ಯಕ್ತಿತ್ವದ ಚಿಂತನೆಗಳು ಒಂದಾಗಿ ಸೇರಲು ಕಾರಣವಾಯಿತು. ಮುಳಿಯ ಮಳಿಗೆಗಳಲ್ಲಿ ಗ್ರಾಹಕರಿಗೆ ಅನುಕೂಲವಾದ ವಾತಾವರಣಕ್ಕೆ ಬೇಕಾದ ಸೌಲಭ್ಯಗಳನ್ನು ಮಾಡಲಾಗಿದೆ ಎಂದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಪುತ್ತೂರಿನ ಮಹಾಲಿಂಗೇಶ್ವರ ದೇವಳಕ್ಕೆ ಆಗಮಿಸಿದ ಚಿತ್ರನಟ ರಮೇಶ್ ಅರವಿಂದ್ ಅವರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ದೇವಳದಿಂದ ದೇವರ ದೀಪದೊಂದಿಗೆ ರಮೇಶ್ ಅರವಿಂದ್ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಮುಳಿಯಕ್ಕೆ ಕರೆ ತರಲಾಯಿತು. ಮುಳಿಯ ಸಂಸ್ಥೆಯ ವಿಸ್ತೃತ ಕಟ್ಟಡವನ್ನು ತೆರೆ ಸರಿಸುವ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟಿಸಲಾ ಯಿತು. ಬಲೂನು ಹಾರಿ ಬಿಡುವ ಮೂಲಕ ಕಟ್ಟಡ ಅನಾವರಣ ಮಾಡಲಾಯಿತು. ಮಳಿಗೆಯ ವಿವಿಧ ಕೆಲಸದಲ್ಲಿ ಶ್ರಮಿಸಿದವರನ್ನು ಗೌರವಿಸಲಾಯಿತು. ರಮೇಶ್ ಅರವಿಂದ್ ಅವರಿಗೆ ವಿಶೇಷ ಬ್ರಾಂಡ್‌ನ ಕಡಗವನ್ನು ಉಡುಗೊರೆಯಾಗಿ ತೊಡಿಸಲಾಯಿತು.
ವಿದುಷಿ ನಂದಿನಿ ನಾಯಕ್ ಪ್ರಾರ್ಥಿಸಿದರು. ಸಂಸ್ಥೆಯ ಬ್ರಾ್ಯಂಡ್ ಕನ್ಸಲ್ಟೆಂಟ್ ವೇಣು ಶರ್ಮ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಬಿಗ್‌ಬಾಸ್ ಖ್ಯಾತಿಯ ಕಲಾವಿದ ಪ್ರದೀಪ್ ಬಡೆಕ್ಕಿಲ ಕಾರ್ಯಕ್ರಮ ನಿರೂಪಿಸಿದರು.







