ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ| ಒಂದೇ ದಿನ 8,168 ಪ್ರಯಾಣಿಕರ ನಿರ್ವಹಿಹಣೆಯ ದಾಖಲೆ

ಮಂಗಳೂರು, ಅ.5. ಮಹಾನವಮಿ ಹಬ್ಬದ ಸಂದರ್ಭದಲ್ಲಿ (ಅ.1) ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ದಿನ 8,168 ಪ್ರಯಾಣಿಕರನ್ನು ನಿರ್ವಹಿಸಿದೆ ಮಹತ್ವದ ದಾಖಲೆ ಬರೆದಿದೆ.
ಒಟ್ಟು 61 ವಿಮಾನಗಳಲ್ಲಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2,183 ಅಂತರ್‌ರಾಷ್ಟ್ರೀಯ ಪ್ರಯಾಣಿಕರು, 5,971 ದೇಶೀಯ ಮತ್ತು 14 ಪ್ರಯಾಣಿಕರು ನಿಗದಿತ ವಿಮಾನಗಳಲ್ಲಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು.
ಈ ಪೈಕಿ 46 ದೇಶೀಯ (23 ಆಗಮನ ಮತ್ತು 23 ನಿರ್ಗಮನ) ಮತ್ತು 12 ಅಂತರ್‌ರಾಷ್ಟ್ರೀಯ (ಆರು ಆಗಮನ ಮತ್ತು ಆರು ನಿರ್ಗಮನ), ಹೆಚ್ಚುವರಿಯಾಗಿ ಒಂದು ಚಾರ್ಟರ್ಡ್ ವಿಮಾನ ಮತ್ತು ಎರಡು ರಕ್ಷಣಾ ವಿಮಾನಗಳ ದಟ್ಟಣೆಯನ್ನು ಮಂಗಳೂರು ವಿಮಾನ ನಿಲ್ದಾಣವು ನಿರ್ವಹಿಸಿದೆ.
ಮಂಗಳೂರು ದಸರಾದಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿದ್ದ ಚಾರ್ಟರ್ಡ್ ವಿಮಾನವನ್ನು ನಿರ್ವಹಿಸಲಾಗಿತ್ತು.
ವಿಮಾನ ನಿಲ್ದಾಣದ ‘ ಎಕ್ಸ್’ನಲ್ಲಿ ಪೋಸ್ಟ್ ಮಾಡಲಾಗಿರುವ ಅಧಿಕೃತ ದಾಖಲೆ ಪ್ರಕಾರ, ಈ ಸಾಧನೆಯು ಅಕ್ಟೋಬರ್ 31, 2020 ರಂದು ವಿಮಾನ ನಿಲ್ದಾಣದ ವಾಣಿಜ್ಯ ಕಾರ್ಯಾಚರಣೆ (ಸಿಒಡಿ) ಆರಂಭಗೊಂಡ ನಂತರ ಅತಿ ಹೆಚ್ಚು ಏಕದಿನದ ಸಂಚಾರವನ್ನು ಸೂಚಿಸುತ್ತದೆ. ವಿಮಾನ ನಿಲ್ದಾಣದ ಹಿಂದಿನ ಅತ್ಯಧಿಕ ಏಕದಿನ ಪ್ರಯಾಣಿಕರ ದಾಖಲೆ ಎಪ್ರಿಲ್ 12, 2025 ರಂದು 8,103 ಆಗಿದ್ದು, ಫೆಬ್ರವರಿ 22, 2025 ರಂದು 8,086 ಮಂದಿ ಪ್ರಯಾಣಿಕರನ್ನು ನಿರ್ವಹಿಸಲಾಗಿತ್ತು.
‘‘ನಮ್ಮ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವದ ಪ್ರಯಾಣ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ವಿಶ್ವಾಸವನ್ನು ಪ್ರತಿಬಿಂಬಿ ಸುವ ಕ್ಷಣ’’ ಎಂದು ವಿಮಾನ ನಿಲ್ದಾಣ ಬರೆದಿದ್ದು, ಪ್ರಯಾಣಿಕರ ವಿಶ್ವಾಸ ಮತ್ತು ಕಾರ್ಯಾಚರಣೆಯ ಸಾಮರ್ಥ್ಯ ದಲ್ಲಿನ ನಿರಂತರ ಏರಿಕೆಯನ್ನು ತೋರಿಸುತ್ತದೆ ಎಂದು ‘ಎಕ್ಸ್’ನಲ್ಲಿ ಬರೆಯಲಾಗಿದೆ.
ವಿಸ್ತರಣೆ ಮತ್ತು ದಕ್ಷತೆಯ ಚಾಲನೆ ಸುಧಾರಿತ ಮೂಲಸೌಕರ್ಯ, ವರ್ಧಿತ ವಿಮಾನಯಾನ ಸಂಪರ್ಕ ಮತ್ತು ಹಬ್ಬದ ಋತುವಿನ ಬೇಡಿಕೆಯಿಂದಾಗಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ ಕೆಲವು ವರ್ಷಗಳಿಂದ ವಿಮಾನ ನಿಲ್ದಾಣವು ವಿಮಾನಗಳ ಸಂಚಾರದಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.







