ಜುಗಾರಿ ಆಟವಾಡುತ್ತಿದ್ದ ಆರೋಪ: 9 ಮಂದಿ ಸೆರೆ

ಮಂಗಳೂರು,ಎ.24: ಬಂಗ್ರಕೂಳೂರು ಗ್ರಾಮದ ಮನೆಯಲ್ಲಿ ಜುಗಾರಿ ಆಟವಾಡುತ್ತಿದ್ದ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಶೋಕ್ (50), ಆನಂದ (55), ಸುಜಿತ್ ಮಸ್ಕರೇನಸ್ (42), ಶರತ್ ಕುಮಾರ್ (40), ನವೀನ್(27), ಧನರಾಜ್(40), ರೂಪೇಶ್ (44), ನಿರಂಜನ್ (42), ಮಂಜುನಾಥ (30) ಬಂಧಿತ ಆರೋಪಿಗಳು.
ಜುಗಾರಿ ಆಟಕ್ಕೆ ಬಳಸಿದ ಒಟ್ಟು 16,300 ರೂ.ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





