ಫೆ. 9-11: ಕಲ್ಕಟ್ಟದಲ್ಲಿ ಸ್ವಲಾತ್ ವಾರ್ಷಿಕ ಕಾರ್ಯಕ್ರಮ
ಉಳ್ಳಾಲ: ಎಸ್ ವೈ ಎಸ್ , ಎಸ್ ಎಸ್ ಎಫ್ ಹಾಗೂ ಟಿಐವೈಎ ಇವುಗಳ ಆಶ್ರಯದಲ್ಲಿ 24 ನೇ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಕಲ್ಕಟ್ಟ ಜುಮಾ ಮಸೀದಿಯ ಖತೀಬ್ ಎನ್.ವಿ. ಇಸ್ಹಾಕ್ ಸಖಾಫಿ ನಂದಾವರ ಅಧ್ಯಕ್ಷತೆಯಲ್ಲಿ ಫೆ.9-11ವರೆಗೆ ನಡೆಯಲಿದೆ.
ಸೈಯದ್ ಮುಖ್ತಾರ್ ತಂಙಳ್ ಕುಂಬೋಳ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಫೆ.9 ರಂದು ಖಾಸಿಂ ಹಸನಿ ಕಾಮಿಲ್ ಸಖಾಫಿ ಪಾಲಕ್ಕಾಡ್ ರವರ ನೇತೃತ್ವದಲ್ಲಿ ಬೃಹತ್ ಬುರ್ಧಾ ಮಜ್ಲಿಸ್, ಫೆ.10 ರಂದು ಎಂ.ಸಿ.ಮುಹಮ್ಮದ್ ಫೈಝಿ ಅವರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್, ಫೆ.11 ರಂದು ಸಯ್ಯಿದ್ ಹಸನ್ ಅಲ್ ಬುಖಾರಿ ಅಸ್ಸಖಾಫಿಯವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





