ಸಿಬಿಎಸ್ಇ ಪರೀಕ್ಷೆ: ಕಣಚೂರು ಪಬ್ಲಿಕ್ ಸ್ಕೂಲ್ ಗೆ 98.4% ಫಲಿತಾಂಶ

ಕೊಣಾಜೆ: 10ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಕಣಚೂರು ಪಬ್ಲಿಕ್ ಸ್ಕೂಲ್ 98.4% ಫಲಿತಾಂಶವನ್ನು ದಾಖಲು ಮಾಡಿದೆ. ಈ ಸಂಸ್ಥೆಯ 66 ವಿದ್ಯಾರ್ಥಿಗಳು ಮಾರ್ಚ್ 2025ಲ್ಲಿ ಪರೀಕ್ಷೆಗೆ ಹಾಜರಾಗಿದ್ದು, 20 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದವರು: ಇಫ್ರ ಸುಝೈನ, ಪ್ರಧಾನ್ ಕೆ ಶೆಟ್ಟಿ, ಅಬ್ದುಲ್ ಹಾದಿ ಅಬ್ಬಾಸ್, ಅಬ್ದುಲ್ ಹಿಯಾಮ್ ಹಸನ್ , ರೀಮ್ ಫಾತಿಮ, ನೊರೈಜ್ ಅಝಮಲ್ ಅಬ್ದುಲ್ ಖಾದರ್, ಸನದ್ ಇಬ್ರಾಹಿಂ, ಮೊಹಮ್ಮದ್ ಅದೀಬ್ ಖಾನ್, ಅಮ್ನ ಸೈಲ, ಆಯಿಶಾ ಸನ, ಫಾತಿಮತ್ ಮುಫ್ಲಿಹಾ ಎಮ್ , ಮೊಹಮ್ಮದ್ ಫರ್ಹಾನ್, ಖದೀಜ ರಿಂಶಾ ಸೆಹ್ರಿಶ್, ದಶಮಿ , ಹನಾ ಫಾತಿಮ ಫಲ್ಹಿಲಾ ರಾಫಾ ಫಾತಿಮ, ಆಶಿಖ್, ಮೊಹಮ್ಮದ್ ಅಫಾನ್, ಮುಹಮ್ಮದ್ ಸುಹೈಲ್ ಝಾಹಿದ್, ಮಾಹಿರ್ ಇಬ್ರಾಹಿಂ ಹಮೀದ್. ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.





