ಬಂಟ್ವಾಳ: Instagramನಲ್ಲಿ ಹಾಕಿದ್ದ ಫೋಟೊ ದುರುಪಯೋಗ; ಪ್ರಕರಣ ದಾಖಲು

ಬಂಟ್ವಾಳ : Instagramನಲ್ಲಿ ಹಾಕಿದ್ದ ಫೋಟೊವನ್ನು ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ಇತ್ತೀಚೆಗೆ ನಡೆದ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ದ್ವೇಷ ಉಂಟು ಮಾಡುವ ಸಂದೇಶ ಪ್ರಸಾರ ಮಾಡಿದ ಬಗ್ಗೆ ವ್ಯಕ್ತಿಯೋರ್ವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಅಮ್ಟಾಡಿ ಗ್ರಾಮದ ಲೊರೆಟ್ಟೊಪದವು ನಿವಾಸಿ ಪ್ರಜ್ವಲ್ ಶೆಟ್ಟಿ (29) ಅವರು ಪೊಲೀಸರಿಗೆ ದೂರು ನೀಡಿದ್ದು, Instagramನಲ್ಲಿ ಹಾಕಿದ್ದ ಫೋಟೊವನ್ನು ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಂಡು, ಇತ್ತೀಚೆಗೆ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಮುದ್ವೇಷವನ್ನು ಉಂಟು ಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದಾಗಿ ತಾನು ಜೀವ ಭಯ ಕ್ಕೊಳಗಾಗಿರುತ್ತೇನೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂದ್ದಾರೆ.
Next Story