ಡಿ.1ರಿಂದ ಎಸ್‌ವೈಎಸ್‌ನಿಂದ ಸರ್ಕಲ್ ರಿಹ್‌ಲ
ಮಂಗಳೂರು, ನ.30: ಎಸ್‌ವೈಎಸ್ ದ.ಕ. ವೆಸ್ಟ್ ಜಿಲ್ಲಾ ಸಮಿತಿಯಿಂದ ಘಟಕಗಳನ್ನು ಸಕ್ರಿಯಗೊಳಿಸುವುದರ ಭಾಗವಾಗಿ ’ಸರ್ಕಲ್ ರಿಹ್‌ಲ’ ಎಂಬ ಹೆಸರಿನಲ್ಲಿ ಜಿಲ್ಲಾ ನಾಯಕರಿಂದ ಜಿಲ್ಲಾ ವ್ಯಾಪ್ತಿಯ ಸರ್ಕಲ್‌ನತ್ತ ಪಯಣವು ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ವಿ.ಯು. ಇಸ್ಹಾಕ್ ಝುಹ್ರಿಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಎರಡು ಹಂತಗಳಲ್ಲಿ ನಡೆಯಲಿದೆ.
ಡಿ.1ರಂದು ಸಜಿಪ, ಬೋಳಿಯಾರು, ಸುರತ್ಕಲ್, ಕೃಷ್ಣಾಪುರ, ಬಂಟ್ವಾಳ, ಪಾಣೆಮಂಗಳೂರು, ಕೊಣಾಜೆ, ಹರೇಕಳ, ಮುಲ್ಕಿ, ಕಾಟಿಪಳ್ಳ, ಮುಡಿಪು, ಬಾಳೆಪುಣಿ, ಕಿನ್ಯ, ಮಂಜನಾಡಿ, ಅಮ್ಮುಂಜೆ, ಕೈಕಂಬ,ಕೂಳೂರು ಸರ್ಕಲ್‌ಗಳಲ್ಲಿ ನಡೆಯಲಿದೆ.
ಡಿ.8ರಂದು ಮಂಗಳೂರು, ಉಳ್ಳಾಲ, ತಲಪಾಡಿ, ಕೋಟೆಕಾರ್, ಫರಂಗಿಪೇಟೆ, ಕಣ್ಣೂರು, ಮೂಡುಬಿದಿರೆ, ಬಜ್ಪೆ, ಬೆಳ್ಮ, ನಾಟೆಕಲ್ ತೌಡುಗೋಳಿ, ಮೋಂಟುಗೋಳಿ, ಸುರಿಬೈಲ್, ಮಂಚಿ, ಸಾಲೆತ್ತೂರು, ಬೋಳಂತೂರು ಸರ್ಕಲ್‌ಗಳಲ್ಲಿ ನಡೆಯಲಿದೆ ಎಂದು ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುರ‌್ರಹ್ಮಾನ್ ಹಾಜಿ ಪ್ರಿಂಟೆಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story