ಫೆ.10: ಮಳ್‌ಹರ್ ವಿದ್ಯಾಸಂಸ್ಥೆಯ ಮುಂಬೈ ಘಟಕದ ಸ್ವಲಾತ್ ವಾರ್ಷಿಕ
ಮುಂಬೈ: ಮಂಜೇಶ್ವರದ ಮಳ್‌ಹರ್ ವಿದ್ಯಾಸಂಸ್ಥೆಯ ಮುಂಬೈ ಘಟಕದ 10ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಫೆ.10ರ ಮಗ್ರಿಬ್ ನಮಾಝ್ ಬಳಿಕ ದಾದರ್ ಪೂರ್ವದ ಲತೀಫಿಯ್ಯಾ ಸುನ್ನಿ ಮಸ್ಜಿದ್‌ನಲ್ಲಿ ನಡೆಯಲಿದೆ.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಮಳ್‌ಹರ್ ವಿದ್ಯಾಸಂಸ್ಥೆಯ ನಿರ್ದೇಶಕ ಸೈಯ್ಯದ್ ಅಬ್ದುರ‌್ರಹ್ಮಾನ್ ಶಹೀರ್ ತಂಳ್, ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ, ಕೆಸಿಎಫ್ ಇಂಟರ್ ನ್ಯಾಷನಲ್ ಕೌನ್ಸಿಲ್‌ನ ಮಾಜಿ ಅಧ್ಯಕ್ಷ ಡಾ. ಶೇಖ್ ಬಾವ ಹಾಜಿ, ಮುಸ್ತಾಫ ನಈಮಿ ಹಾವೇರಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಳ್‌ಹರ್ ಮುಂಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತೌಡುಗೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





