ಫೆ.11ರಿಂದ ಹಳೆಯಂಗಡಿ ಕದಿಕೆ ಉರೂಸ್: ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕುಡುಂಬೂರು ಆಯ್ಕೆ

ಹಳೆಯಂಗಡಿ: ಇತಿಹಾಸ ಪ್ರಸಿದ್ಧ ಹಝ್ರತ್ ಸೆಯ್ಯದ್ ಮೌಲಾನಾ ವಲಿಯುಲ್ಲಾಹಿ ದರ್ಗಾ ಶರೀಫ್ ಕದಿಕೆ ಹಳೆಯಂಗಡಿ ಇಲ್ಲಿ ಎರಡು ವರ್ಷಕ್ಕೆ ನಡೆಯುವ ಉರೂಸ್ ಸಮಾರಂಭವು 2026ರ ಫೆ.11ರಿಂದ 14ರ ವರೆಗೆ ಜರುಗಲಿದೆ.
ಉರೂಸ್ ಸಂಬಂಧ ರವಿವಾರ ದರ್ಗಾ ವಠಾರದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ನೂತನ ಉರೂಸ್ ಸಮಿತಿಯ ಪದಗ್ರಹಣ ಕಾರ್ಯಕ್ರಮ ಇದೇ ವೇಳೆ ನಡೆಯಿತು.
ಉರೂಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ರಹ್ಮಾನ್ ಕುಡುಂಬೂರು ಅವಿರೋಧ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕದಿಕೆ, ಮುಹಮ್ಮದ್ ಅಶ್ರಫ್ ಪಡುತೋಟ, ಕಾರ್ಯದರ್ಶಿಗಳಾಗಿ ಎಚ್.ಕೆ. ಮುಹಮ್ಮದ್, ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಜೊತೆ ಕಾರ್ಯದರ್ಶಿಯಾಗಿ ಫಕ್ರುದ್ದೀನ್, ಖಜಾಂಚಿ ಯಾಗಿ ಅಬ್ದುಲ್ ಖಾದರ್ ಸಾಗ್, ಪ್ರಚಾರ ಸಮಿತಿಯ ಸಂಚಾಲಕರಾಗಿ ಜಮಾಲುದ್ದೀನ್ ಕದಿಕೆ, ಸಿದ್ದೀಕ್ ಕದಿಕೆ ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
Next Story





