ಜೂ.13: ಅಲ್ ಬಿರ್ರ್ ತರಗತಿ ಉದ್ಘಾಟನೆ

ದೇರಳಕಟ್ಟೆ, ಜೂ.12: ಇಲ್ಲಿಗೆ ಸಮೀಪದ ನಾಟೆಕಲ್ ವಾದಿನ್ನೂರು ಫಾತಿಮಾ ಕಾಂಪ್ಲೆಕ್ಸ್‌ನಲ್ಲಿರುವ ಅಲ್ ಬಿರ್ರ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ತರಗತಿಯನ್ನು ಜೂ.13ರಂದು ಬೆಳಗ್ಗೆ 10ಕ್ಕೆ ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಸಯ್ಯಿದುಲ್ ಉಲಮಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ.
ಅಲ್ ಬಿರ್ರ್ ಸ್ಕೂಲ್‌ನ ಅಧ್ಯಕ್ಷ ಸ್ವಾಗತ್ ಅಬೂಬಕರ್ ಹಾಜಿ ನಾಟೆಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಲ್ ಬಿರ್ರ್ ಸ್ಕೂಲ್‌ನ ನಿರ್ದೇಶಕ ಕೆ.ಪಿ.ಮುಹಮದ್, ಕೆ.ಎಲ್.ಅಬ್ದುಲ್ ಖಾದರ್ ಅಲ್ ಖಾಸಿಮಿ ಪೆರಾಲ್, ಅತಿಥಿಗಳಾಗಿ ಅಲ್ ಬಿರ್ರ್ ಸ್ಕೂಲ್‌ನ ದ.ಕ.ಜಿಲ್ಲಾ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ, ಅಲ್ ಬಿರ್ರ್ ಸ್ಕೂಲ್‌ನ ತರಬೇತುದಾರರಾದ ಸಯ್ಯಿದ್ ಅಫ್ಹಾಮ್ ತಂಙಳ್ ಪುತ್ತೂರು, ರಫೀಕ್ ಮಾಸ್ಟರ್, ಪಿ.ಎಂ. ಅಬೂಬಕರ್ ಹಾಜಿ ನಾಟೆಕಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





