ಜೂ.13, 14 ರಂದು ಕಣಚೂರು ಆಸ್ಪತ್ರೆಯಲ್ಲಿ ಕಾರ್ಯಾಗಾರ : ಡಾ. ಚೇತನ್ ತಾಂಡೇಲ್

ಉಳ್ಳಾಲ: ನಾಟೆಕಲ್ ಕಣಚೂರು ವೈದಕೀಯ ವಿಜ್ಞಾನ ಸಂಸ್ಥೆಯ ಮಕಳ ಚಿಕಿತ್ಸಾ ವಿಭಾಗದ ವತಿಯಿಂದ ಜೂ 13 ಮತ್ತು 14 ರಂದು ಮಕ್ಕಳ ಹೃದ್ರೋಗಶಾಸ್ತ್ರ ವಿಚಾರದ ಕುರಿತು ಎರಡು ದಿನಗಳ ಕಲಿಕಾ ಶಿಕ್ಷಣ ಕರ್ಯಾಗಾರ ಕಾಲೇಜು ಆವರಣದಲ್ಲಿ ನಡೆಯಲಿದೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದ್ರೋಗ ಕಾಯಿಲೆಗಳ ಜಾಗೃತಿಗಾಗಿ ಈ ಕಾರ್ಯಾಗಾರ ಆಯೋಜಿಸಲಾ ಗುತ್ತಿದೆ ಎಂದು ಕಣಚೂರು ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ , ಸಂಘಟಕ ಡಾ.ಚೇತನ್ ತಾಂಡೇಲ್ ಹೇಳಿದ್ದಾರೆ.
ಅವರು ತೊಕ್ಕೊಟ್ಟು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರ ಮಕ್ಕಳ ಹೃದಯ ಸಂಬಂಧಿ ಪ್ರಮುಖ ರೋಗ ನಿರ್ಣಯ, ಕ್ಷೇತ್ರದಲ್ಲಿ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಸಿಜಿ, ಎದೆಯ ಎಕ್ಸ್ ರೇ ಓದುವಿಕೆ ಮತ್ತು ಮಕಳ ಎಕೋಕಾರ್ಡಿಯೋಗ್ರಫಿಯ ಮೇಲೆ ಕೇಂದ್ರೀಕೃತ ಅವಧಿ, ಸಲಹೆಗಾರರು, ಮಕ್ಕಳ ವೈದ್ಯರು ಮತ್ತು ಸ್ನಾತಕೋತರ ವೈದಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕಣಚೂರು ವೈದಕೀಯ ವಿಜಾನ ಸಂಸ್ಥೆ ಅಧಕ್ಷ ಡಾ. ಹಾಜಿ ಯು.ಕೆ. ಮೋನು ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.
ಈ ಸಮಾರಂಭದಲ್ಲಿ ಕಿಮ್ಸ್ ನಿರ್ದೇಶಕ ಅಬುಲ್ ರಹಿಮಾನ್, ಕಣಚೂರು ಆರೋಗ್ಯವಿಜಾನ ಸಲಹಾ ಮಂಡಳಿಯ ಅಧಕ್ಷ ಡಾ. ಇಸ್ಮಾಯಿಲ್ ಹೆಜಮಾಡಿ ಮತ್ತು ಸದಸ್ಯ ಡಾ. ಎಂ. ವಿ. ಪ್ರಭು, ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ, ಮೆಡಿಕಲ್ ಸೂಪರಿಡೆಂಟ್ ಡಾ. ಅಂಜನ್ ಕುಮಾರ್ ಎ.ಎನ್, ಮಕ್ಕಳ ವೈದ್ಯಕೀಯ ವಿಭಾಗದ ಪ್ರೊಫೆಸರ್ ಡಾ. ಶಂಶಾದ್ ಎ. ಖಾನ್, ಆಡಳಿತಾಧಿಕಾರಿ ಡಾ. ರೋಹನ್ ಎಸ್.ಮೋನಿಸ್ ಭಾಗವಹಿಸಲಿದ್ದಾರೆ.
ಕಣಚೂರು ಮಕ್ಕಳ ವಿಭಾಗ ಮುಖ್ಯಸ್ಥ ಡಾ.ಅನಿಲ್ ಫೆರ್ನಾಂಡಿಸ್ ಮಾತನಾಡಿ, ಇತ್ತೀಚೆಗೆ ಮಕ್ಕಳಲ್ಲಿ ಹೃದ್ರೋಗ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪೂರ್ವ ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಿದಲ್ಲಿ ಚಿಕಿತ್ಸೆ ನೀಡಲು ಸಾಧ್ಯ. ಇಂತಹ ವಿಚಾರಗಳ ಕುರಿತು ಕಾರ್ಯಾಗಾರ ದಲ್ಲಿ ಜ್ಞಾನ ವಿನಿಮಯ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕಣಚೂರು ಮಕ್ಕಳ ವಿಭಾಗದ ಡಾ. ಗೌತಮ್ ಪೈ , ಡಾ.ನೂಮನ್ ಉಪಸ್ಥಿತರಿದ್ದರು.