ಎ.13-17: ಮಡವೂರು ಮಖಾಂ ಉರೂಸ್
![ಎ.13-17: ಮಡವೂರು ಮಖಾಂ ಉರೂಸ್ ಎ.13-17: ಮಡವೂರು ಮಖಾಂ ಉರೂಸ್](https://www.varthabharati.in/h-upload/2024/04/03/1258196-123546.webp)
ಮಂಗಳೂರು, ಎ.3 : ಮಡವೂರ್ ಸಿ.ಎಂ. ಮಖಾಂ ಶರೀಫ್ನ ಸಿಎಂ ಮುಹಮ್ಮದ್ ಅಬೂಬಕರ್ ಮುಸ್ಲಿಯಾರ್ರ 34ನೇ ಉರೂಸ್ ಕಾರ್ಯಕ್ರಮವು ಎ.13ರಿಂದ 17ರವರೆಗೆ ನಡೆಯಲಿದೆ.
ಎ.13ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ ಹಾಗೂ ಮಖಾಂ ಝಿಯಾರತ್ ನಡೆಯಲಿದೆ. ಬಳಿಕ ಖತ್ಮುಲ್ ಖುರ್ಆನ್ ಪಾರಾಯಣ ನಡೆಯಲಿದೆ. 16ರಂದು ಸಂಜೆ 7ಕ್ಕೆ ದ್ಸಿಕ್ರ್ ದುಆ ಮಜ್ಲಿಸ್, ಎ.17ರಂದು ಬೆಳಗ್ಗೆ 6ರಿಂದ ಸಂಜೆ 4ರ ತನಕ ಅನ್ನದಾನ ನಡೆಯಲಿದೆ. ಕಾರ್ಯಕ್ರಮದ ಎಲ್ಲಾ ದಿನ ಮಗ್ರಿಬ್ ನಮಾಝ್ ಬಳಿಕ ಮತ ಪ್ರಭಾಷಣ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story