ಫೆ.14: ಬ್ಯಾರಿ ಬರಹಗಾರರ ಸ್ನೇಹಕೂಟ; ಆಸಕ್ತರಿಗೆ ಆಹ್ವಾನ
ಮಂಗಳೂರು, ಫೆ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಬ್ಯಾರಿ ಬರಹಗಾರರ ನಡುವೆ ಪರಸ್ಪರ ಸಮನ್ವಯ ಏರ್ಪಡಿಸುವ ನಿಟ್ಟಿನಲ್ಲಿ ಫೆ.14ರಂದು ನಗರದ ಮಂಗಳೂರು ವಿವಿ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಬ್ಯಾರಿ ಬರಹಗಾರರ ಸ್ನೇಹಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 4:30ರಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಕಾರ್ಯಕ್ರಮದ ಸದಸ್ಯ ಸಂಚಾಲಕ ಯು.ಎಚ್. ಖಾಲಿದ್ ಉಜಿರೆ (ಮೊ.ಸಂ:9845499527)ಇವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸ ಬಹುದು ಎಂದು ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





