ಮಾ.14: ಕೆಸಿಎಫ್ ವತಿಯಿಂದ ಲಂಡನ್ ನಲ್ಲಿ ಗ್ರಾಂಡ್ ಇಫ್ತಾರ್ ಕೂಟ, ಆಧ್ಯಾತ್ಮಿಕ ಸಂಗಮ
ಮಂಗಳೂರು : ಕೆ.ಸಿ.ಎಫ್. ಯುನೈಟೆಡ್ ಕಿಂಗ್ಡಮ್ ಸಮಿತಿ ಪವಿತ್ರ ರಮಳಾನ್ ಪ್ರಯುಕ್ತ ವರ್ಷಂಪ್ರತಿ ಆಯೋಜಿಸುವ ಗ್ರಾಂಡ್ ಇಫ್ತಾರ್ ಕೂಟ ಮತ್ತು ಆಧ್ಯಾತ್ಮಿಕ ಸಂಗಮ ಮಾ.14ರಂದು ಲಂಡನ್ನಿನ ಬರ್ನೆಟ್ ಮಲ್ಟಿ ಕಲ್ಚರಲ್ ಕಮ್ಯೂನಿಟಿ ಸೆಂಟರಿನಲ್ಲಿ ನಡೆಯಲದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಸಂಗಮ, ಗ್ರಾಂಡ್ ಇಫ್ತಾರ್ ಹಾಗೂ ಔತಣಕೂಟ ಮುಂತಾದವು ಗಳನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಹುಭಾಷಾ ವಾಗ್ಮಿ ನೌಫಲ್ ಸಖಾಫಿ ಕಳಸ ಆಗಮಿಸಲಿದ್ದಾರೆಂದು ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಇದರ ಮಾಧ್ಯಮ ಮತ್ತು ನಿರ್ವಾಹಕ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Next Story





