ಜು.14ರಂದು ಕಾಪುವಿನಲ್ಲಿ ಸೌಹಾರ್ದ ಸಂಚಾರ ಜಾಥಾ

ಕಾಪು : ನಾಡಿನ ಭಾವೈಕ್ಯತೆಯ ಪರಂಪರೆಯನ್ನು ಎತ್ತಿ ಹಿಡಿದು, ಸೌಹಾರ್ದತೆಯ ಸಂದೇಶವನ್ನು ಸಾರಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಆಯೋಜಿಸುತ್ತಿರುವ "ಸೌಹಾರ್ದ ಸಂಚಾರ" ಜಾಥ ಜುಲೈ 14ರಂದು ಕಾಪುವಿಗೆ ತಲುಪಲಿದೆ.
ಕಾಪು ಪ್ರೆಸ್‍ಕ್ಲಬ್‍ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಎಸ್‍ವೈಎಸ್ ಜನರಲ್ ಕನ್ವೀನರ್ ಎಂ.ಕೆ ಇಬ್ರಾಹಿಂ ಮಜೂರು ಈ ಬಗ್ಗೆ ಮಾಹಿತಿ ನೀಡಿದರು.
ಜುಲೈ 14 ಸೋಮವಾರ ಕಾಪು ಪೊಲಿಪು ಮಸೀದಿ ಮುಂಭಾಗದ ಜಂಕ್ಷನ್‍ನಿಂದ ಕಾಪು ಪೇಟೆಯವರೆಗೆ ಸೌಹಾರ್ದ ಕಾಲ್ನಡಿಗೆ ಜಾಥಾ ಹಾಗೂ ಕಾಪು ಪೇಟೆಯಲ್ಲಿ ಸೌಹಾರ್ದ ಸಂದೇಶ ಭಾಷಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಸ್‍ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕ್ಕರ್ ಸಿದ್ದೀಕ್, ಮನ್ಸೂರ್ ಶಿವಮೊಗ್ಗ, ಸಯ್ಯದ್ ಹಾಮೀಂ ತಂಙಳ್ ಬಾಳೆಹೊನ್ನೂರು, ಇಲ್ಯಾಸ್ ಅಲ್‍ಹೈದ್ರೋಸ್ ತಂಙಳ್ ಕೊಡಗು, ಶಿಹಾಬುದ್ದೀನ್ ತಂಙಳ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಹಿತ ಸರ್ವ ಧರ್ಮಿಯ ವಿವಿಧ ಧಾರ್ಮಿಕ ಕ್ಷೇತ್ರದ ಪ್ರಮುಖರು ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳ ಮುಂದಾಳುಗಳು ಭಾಗವಹಿಸಲಿ ದ್ದಾರೆ ಎಂದರು.
ಸ್ವಾಗತ ಸಮಿತಿ ಚಯರ್ ಮ್ಯಾನ್ ಅಬ್ದುಲ್ ಹಾಜಿ ಮೂಳೂರು, ಎಂ.ಕೆ ಇಬ್ರಾಹಿಂ ಮಜೂರು, ಹನೀಫ್ ಹಾಜಿ ಕನ್ನಂಗಾರ್, ಟಿ. ಪಿ ಬಶೀರ್ ಮುಸ್ಲಿಯಾರ್, ಎಂ.ಕೆ ಸಯ್ಯದ್ ಆಲಿ ಉಪಸ್ಥಿತರಿದ್ದರು.





