ಜೂ.14-15ರಂದು ಪಿಲಿಕುಳದಲ್ಲಿ ಹಣ್ಣುಗಳ ಮೇಳ

ಸಾಂದರ್ಭಿಕ ಚಿತ್ರ
ಮಂಗಳೂರು,ಜೂ.12:ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ರೈತರು ಹಾಗೂ ಉತ್ಪಾದಕರಿಗೆ ನೇರ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ನಾನಾ ಮೇಳಗಳು ಮತ್ತು ವಸ್ತು ಪ್ರದರ್ಶನಗಳನ್ನು ಆಯೋಜಿಸುತ್ತಾ ಬಂದಿದೆ.
ಈ ಬಾರಿ ಜೂನ್ 14 ಮತ್ತು 15ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಪಿಲಿಕುಳದ ಅರ್ಬನ್ ಹಾಥ್ ಮಳಿಗೆಗಳ ಸಂಕೀರ್ಣ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ದ.ಕ.ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು, ಉತ್ಪಾದಕರು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ವಿವಿಧ ಸಂಸ್ಥೆಗಳು ಭಾಗವಹಿಸಲಿದೆ.
ಪ್ರಾದೇಶಿಕ ಹಾಗೂ ವಿಶಿಷ್ಟ ಮಾವು, ಹಲಸು ಮತ್ತು ಇತರ ಹಣ್ಣುಗಳು, ಹಣ್ಣುಗಳಿಂದ ತಯಾರಿಸಿದ ವಿವಿಧ ಆಹಾರ ಪದಾರ್ಥಗಳು, ಹಲಸಿನ ಜಿಲೇಬಿ, ಗಾರಿಗೆ, ಪಾನೀಯಗಳ ಪ್ರತ್ಯಕ್ಷ ಪ್ರದರ್ಶನ ಹಾಗೂ ಮಾರಾಟ, ಔಷಧೀಯ ಗಿಡಗಳು, ಕಸಿ ಗಿಡಗಳು, ಹಣ್ಣುಗಳ ಸಸಿಗಳು, ಸಾವಯವ ತರಕಾರಿ ಬೀಜಗಳು, ಗೃಹೋಪ ಯೋಗಿ ವಸ್ತುಗಳು ಮತ್ತು ಕರಕುಶಲ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವೂ ಇದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





