ಜ.14ರಂದು ಉಳ್ಳಾಲದಲ್ಲಿ ಗುರುಕುಲ ಉತ್ಸವ-2024

ಉಳ್ಳಾಲ: ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಇವರಿಂದ ಗುರುಕುಲ ಉತ್ಸವ-2024 ಉಳ್ಳಾಲದ ಶ್ರೀ ಚೀರುಂಭ ಭಗವತೀ ವೇದಿಕೆಯಲ್ಲಿ ಜ.14 ರಂದು 10ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಮಂತ್ರ ನಾಟ್ಯಕಲಾ ಗುರುಕುಲದ ಅಧ್ಯಕ್ಷರು ಹಾಗೂ ನೃತ್ಯ ನಿರ್ದೇಶಕ ವಿದ್ವಾನ್ ಶ್ರಾವಣ್ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಾಂತಾ ನಾಟ್ಯ ಪ್ರಶಸ್ತಿ ಪುರಸ್ಕøತ ಶ್ರೀ ಉಳ್ಳಾಲ ಮೋಹನ್ ಕುಮಾರ್ ದೇವತಾ ಜ್ಯೋತಿ ಪ್ರಜ್ವಲಿಸಲಿದ್ದು, ಸ್ಪಂದನ ಕೊಪರೇಟಿವ್ ಸೊಸೈಟಿಯ ನಿರ್ದೇಶಕ ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲ, ತೀಯ ಸಮಾಜಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದು, ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್, ಕೋಶಾಧಿಕಾರಿ ಉಮೇಶ್ ಬೆಂಜನಪದವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಗೌರವ ಉಪಸ್ಥಿತರಿದ್ದು, ಆಂಕಲಾಜಿ ವಿಭಾಗ ಮುಖ್ಯಸ್ಥ ಡಾ. ನಜೀಬ್ ಬೆಹ್ಜದ್ ಮೊಹಮ್ಮದ್ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಮತ್ತು ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಸ್ವರಕ್ಷಣೆ ಕುರಿತು ಉರ್ವ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಭಾರತಿ ಜಿ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಕಲಾ ಮಂತ್ರ್ಯಕ ಪ್ರಶಸ್ತಿ ಹಾಗೂ ದಿಕ್ಸೂಚಿ ಭಾಷಣವನ್ನು ವಿಠಲ್ ನಾಯಕ್ ಕಲ್ಲಡ್ಕ ನೆರವೇರಿಸಲಿದ್ದಾರೆ. ಜಿಲ್ಲೆಯ ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಇತ್ತೀಚೆಗೆ ನಿಧನರಾದ ಸಂಸ್ಥೆಯ ಹಳೇ ವಿದ್ಯಾರ್ಥಿ ಶೃತಿ ಅವರ ಹೆಸರಿನಲ್ಲಿ ಶೃತಿ ನಿಧಿ ಹಸ್ತಾಂತರವನ್ನು ನರೇಶ್ ಪಂಡಿತ್ ಹೌಸ್ ನಡೆಸಲಿದ್ದಾರೆ ಎಂದರು.
ಈ ಸಂದರ್ಭ ಸ್ಥಾಪಕಾಧ್ಯಕ್ಷೆ ಶಕೀಲಾ ಜನಾರ್ದನ್, ಟ್ರಸ್ಟಿಗಳಾದ ಕಿರಣ್ ಉಳ್ಳಾಲ್, ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು.





