ಎ.15: ಮಂಗಳೂರಿನಲ್ಲಿ ಜನ ಸಮಾವೇಶ

ಮಂಗಳೂರು, ಎ.12: ಕೋಮುವಾದಿ, ಕಾರ್ಪೊರೇಟ್ ಕಂಪೆನಿಗಳ ಪರವಾದ ಬಿಜೆಪಿ ಕೂಟವನ್ನು ಸೋಲಿಸಲು ಮತ್ತು ಜನಪರ ಕೂಟವಾದ ‘ಇಂಡಿಯಾ ಒಕ್ಕೂಟ’ವನ್ನು ಬೆಂಬಲಿಸಲು ಆಗ್ರಹಿಸಿ, ದ.ಕ.ಜಿಲ್ಲೆಯಲ್ಲಿ ಬಿಜೆಪಿ ದುರಾಡಳಿತ ಕೊನೆಗೊ ಳಿಸಲು ಹಾಗೂ ಅಭಿವೃದ್ದಿ ರಾಜಕಾರಣಕ್ಕಾಗಿ ಕಾಂಗ್ರೆಸ್ಸೇತರ ಜಾತ್ಯತೀತ ಪಕ್ಷ ಮತ್ತು ಅದರ ಬೆಂಬಲಿತ 35ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳ ‘ಬೃಹತ್ ಜನ ಸಮಾವೇಶ’ ಎ.15ರಂದು ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಸಿಪಿಎಂನಿಂದ ಮುನೀರ್ ಕಾಟಿಪಳ್ಳ, ಎಎಪಿ ಪಕ್ಷದ ವಿಶುಕುಮಾರ್, ಸಿಪಿಐ ಪಕ್ಷದ ಬಿ. ಶೇಖರ್, ದಲಿತ ಸಂಘರ್ಷ ಸಮಿತಿಯ ಎಂ. ದೇವದಾಸ್, ಸಿಐಟಿಯು ಸಂಘಟನೆಯ ವಸಂತ ಆಚಾರಿ, ಎಐಟಿಯುಸಿ ಸಂಘಟನೆಯ ಸೀತಾರಾಮ ಬೇರಿಂಜ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೆ. ಕರಿಯ, ರೈತ ಸಂಘದ ರವಿಕಿರಣ್ ಪುಣಚ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story