ಫೆ.15: ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು, ಫೆ.14: ಬಿ.ಸಿ.ರೋಡ್ ಕೈಕಂಬದ ಲೈಫ್‌ಲೈನ್ ಹೆಲ್ತ್‌ಕೇರ್ ಪ್ಲಸ್ ವತಿಯಿಂದ ಫೆ.15ರಂದು ಮಧ್ಯಾಹ್ನ 12:30ರಿಂದ ಸಂಜೆ 4:30ರವರೆಗೆ ವಾತ ಮತ್ತು ಸಂಧಿ ರೋಗಗಳ ತಪಾಸಣಾ ಶಿಬಿರವು ನಡೆಯಲಿದೆ.
ವೈದ್ಯರ ಸಂದರ್ಶನದಲ್ಲಿ ಶೇ.60 ರಿಯಾಯಿತಿ, ಉಚಿತ ಮೂಳೆ ಸಾಂದ್ರತೆ ತಪಾಸಣೆ, ಉಚಿತ ಹಿಮೋಗ್ಲೋಬಿನ್ ಪರೀಕ್ಷೆ, ಉಚಿತ ಡಯಾಬಿಟಿಕ್ ನ್ಯೂರೋಪತಿ ಪರೀಕ್ಷೆ, ಉಚಿತ ಮಧುಮೇಹ ತಪಾಸಣೆ, ಉಚಿತ ವಾತ ಸಂಬಂಧಿತ ರಕ್ತ ಪರೀಕ್ಷೆ, ವೈದ್ಯರು ಸೂಚಿಸುವ ಇನ್ನಿತರ ರಕ್ತ ಪರೀಕ್ಷೆ ಹಾಗೂ ಎಕ್ಸ್‌ರೇ ಪರೀಕ್ಷೆಯ ಮೇಲೆ ಶೇ.35ರವರೆಗೆ ರಿಯಾಯಿತಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





