ಮಾ.15-16: ಕೊಂಕಣಿ ನೇತಾರರ ಜನ್ಮಶತಾಬ್ದಿ ಆಚರಣೆ
ಮಂಗಳೂರು, ಮಾ.13: ಕೊಂಕಣಿ ಭಾಷೆಯನ್ನು ಬೆಳೆಸಿದವರ ಪೈಕಿ ಅಗ್ರಮಾನ್ಯರು ಎನಿಸಿರುವ, ಕೊಂಕಣಿಗೆ ಪ್ರಥಮ ಬಾರಿಗೆ ಜ್ಞಾನಪೀಠ, ಪ್ರಥಮ ಕೇಂದ್ರ ಸಾಹಿತ್ಯ ಆಕಾಡಮಿ ಫೆಲೊಶಿಫ್ ಹಾಗೂ ಪ್ರಥಮ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾದ ಹಿರಿಯ ಗಾಂಧೀವಾದಿ, ಬುದ್ಧ, ಲೊಹಿಯಾ ತತ್ವ ಪ್ರತಿಪಾದಕ ರವೀಂದ್ರ ಕೇಳೆಕರ್ ಅವರ ಜನ್ಮಶತಾಬ್ದಿ ಆಚರಣೆಯನ್ನು ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಾ.15ರಂದು ಆಚರಿಸಲಾಗುವುದು.
ಕೊಂಕಣಿ ಕಾವ್ಯ-ಕವಿತೆ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯ ಕವಿ, ಮುಂಬೈ ಗೋವಾ ವಿಶ್ವ ವಿದ್ಯಾನಿಲಯಗಳ ಫ್ರೆಂಚ್ ಭಾಷಾ ಪ್ರೊಫೆಸರ್, ಅನುವಾದಕ, ರೇಡಿಯೊ ದೂರದರ್ಶನದಲ್ಲಿ ಸತತವಾಗಿ ಕೊಂಕಣಿ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಡಾ. ಮನೋಹರ ರಾಯ್ ಸರ್ದೆಸಾಯ್‌ರ ಜನ್ಮಶತಾಬ್ದಿ ಆಚರಣೆಯನ್ನು ಮಾ.16ರಂದು ಆಚರಿಸಲಾಗುವುದು ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟನೆ ತಿಳಿಸಿದೆ.
Next Story