ಡಿ.15-17: ರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನ

ಮಂಗಳೂರು, ಡಿ.14: ದ.ಕ ಜಿಲ್ಲಾ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಅತಿಥೇಯದಲ್ಲಿ 49ನೇ ರಾಜ್ಯ ಮತ್ತು 8ನೇ ಅಂತಾರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನವು ನಗರದ ಅತ್ತಾವರ ಕಾಪ್ರಿಗುಡ್ಡದಲ್ಲಿರುವ ಮರೆನಾ ಗ್ರೀನ್ಸ್‌ನಲ್ಲಿ ಡಿ.15,16,17 ರಂದು ಜರುಗಲಿದೆ.
ಡಿ.15ರಂದು ಬೆಳಗ್ಗೆ 10ಕ್ಕೆ ಮಾಹೆಯ ವೈಸ್ ಚಾನ್ಸಲರ್ ಲೆ.ಜ. ಡಾ. ವೆಂಕಟೇಶ್ ಸಮ್ಮೇಳನ ಉದ್ಘಾಟಿಸುವರು. ಮಾಹೆಯ ಪ್ರೊ. ಚಾನ್ಸಲರ್ ಡಾ.ಶರತ್ ರಾವ್ ಅತಿಥಿಯಾಗಿರುವರು. ಡಿ.16ರಂದು ಬೆಳಗ್ಗೆ 9:45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅತಿಥಿಯಾಗಿ ಭಾಗವಹಿಸಲಿರುವರು. ಐಡಿಎ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೀವ್ ಕುಮಾರ್ ಚುಗ್, ರಾಷ್ಟ್ರೀಯ ಉಪಾಧ್ಯಕ್ಷ ಡಾ.ಶಿವಶರಣ್ ಶೆಟ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಡಿ.ದೋಬ್ಲೆ, ರಾಜ್ಯ ಅಧ್ಯಕ್ಷ ಡಾ. ರಾಮಮೂರ್ತಿ ಟಿ.ಕೆ, ಜಿಲ್ಲಾ ಐಡಿಎ ಅಧ್ಯಕ್ಷ ಡಾ.ಜುನೈದ್ ಅಹ್ಮದ್ ಭಾಗವಹಿಸುವರು.
ಸಮ್ಮೇಳನದಲ್ಲಿ 26 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ಭಾಷಣ, 231 ಪ್ರಬಂಧ ಮಂಡನೆ, 279 ಚಿತ್ರ ಪ್ರಬಂಧ ಮಂಡನೆ, 13 ಪ್ರಾತ್ಯಕ್ಷಿತೆ ಶಿಬಿರ ನಡೆಯಲಿದೆ. ದೇಶದ ವಿವಿಧೆಡೆಯಿಂದ ಅಂದಾಜು 2 ಸಾವಿರ ದಂತ ವೈದ್ಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





