ಜ.16: ಉಳ್ಳಾಲ ಪೊಲೀಸ್ ಠಾಣೆ ಚಲೋ
ಮಂಗಳೂರು: ದ್ವೇಷ ಭಾಷಣಗೈದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೊಕ್ಕೊಟ್ಟಿ ನಲ್ಲಿ ಪ್ರತಿಭಟನೆ ನಡೆಸಿದ 17 ಮಂದಿಯ ವಿರುದ್ಧ ಉಳ್ಳಾಲ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಕ್ರಮವನ್ನು ಖಂಡಿಸಿ ಡಿವೈಎಫ್‌ಐ ಉಳ್ಳಾಲ ತಾಲೂಕು ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ಜ.16ರಂದು ಉಳ್ಳಾಲ ಪೊಲೀಸ್ ಠಾಣಾ ಚಲೋ ಕಾರ್ಯಕ್ರಮ ಹಮ್ಮಿಕೊಂಡಿವೆ.
ಬೆಳಗ್ಗೆ 10ಕ್ಕೆ ಮಾಸ್ತಿಕಟ್ಟೆ ಬಳಿಯಿಂದ ಠಾಣೆಗೆ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಇಲ್ಲದ ಸ್ವಯಂ ಪ್ರೇರಿತ ಪ್ರಕರಣವು ಶಾಂತಿಯುತ ಪ್ರತಿಭಟನೆ ನಡೆಸಿದ ಡಿವೈಎಫ್‌ಐ ಸಹಿತ ಸಮಾನ ಮನಸ್ಕರ ಮೇಲೆ ಹಾಕಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಚಲೋ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
Next Story





