ಫೆ.16: ಯುನಿವೆಫ್ ಸದಸ್ಯತ್ವ ಅಭಿಯಾನದ ಸಮಾರೋಪ

ಮಂಗಳೂರು: ಯುನಿವೆಫ್ ಕರ್ನಾಟಕವು ಫೆ.2ರಂದು ಆರಂಭಿಸಿದ್ದ ಸದಸ್ಯತ್ವ ಅಭಿಯಾನದ ಸಮಾರೋಪವು ಫೆ.16ರಂದು ಸಂಜೆ 6:45ಕ್ಕೆ ನಗರದ ಕಂಕನಾಡಿಯ ಜಮೀಅತುಲ್ ಫಲಾಹ್ ಹಾಲ್‌ನಲ್ಲಿ ನಡೆಯಲಿದೆ.
ದ.ಕ.ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿ ಸಮಾಜದ ಸಬಲೀಕರಣ ಮತ್ತು ಸ್ವಾವಲಂಬನೆಗಾಗಿ ಹಾಗೂ ಸಹಿಷ್ಣು ಸಮಾಜವಾಗಿ ಪರಿವರ್ತಿಸಿ ದೇಶದ ಅಖಂಡತೆ, ಸಂವಿಧಾನವನ್ನು ರಕ್ಷಿಸುವ ಹೊಣೆಗಾರಿಕೆಯೊಂದಿಗೆ ಮಂಗಳೂರು, ಕುದ್ರೋಳಿ, ಉಳ್ಳಾಲ, ದೇರಳಕಟ್ಟೆ, ಬಂಟ್ವಾಳ, ಬಜ್ಪೆ, ಕೃಷ್ಣಾಪುರ ಶಾಖೆಗಳಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿತ್ತು ಎಂದು ಅಭಿಯಾನ ಸಂಚಾಲಕ ಆಸಿಫ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





