ಡಿ.17 ರಂದು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ "ಸಾಹಿತ್ಯೋತ್ಸವ"

ಬಂಟ್ವಾಳ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವತಿಯಿಂದ "ನಿರೀಕ್ಷೆಗಳ ನೀಲ ನಕ್ಷೆ" ಎಂಬ ಧ್ಯೇಯ ವಾಕ್ಯದಡಿ ಏಕದಿನ ಸಾಹಿತ್ಯೋತ್ಸವ ಕಾರ್ಯಕ್ರಮವು ಬುಡೋಳಿ ಶೇರಾ ಖಿಳ್ರ್ ಜುಮ್ಮಾ ಮಸೀದಿಯ ವಠಾರದಲ್ಲಿ ಡಿಸೆಂಬರ್ 17 ನಡೆಯಲಿದೆ.
ಪೇರಮೊಗರು ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಆರು ಯುನಿಟ್‌ಗಳ ಸಾವಿರಾರು ಪ್ರತಿಭೆಗಳಿಂದ ವಿವಿಧ ವಿಭಾಗಗಳಲ್ಲಿ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರತಿಭೆಗಳಿಗೆ ಮತ್ತು ವಿಜಯೀ ತಂಡಕ್ಕೆ ಬಹುಮಾನ ವಿತರಣೆ ನಡೆಯಲಿದೆ, ಕಾರ್ಯಕ್ರಮದಲ್ಲಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್, ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಹಂಝ ಮದನಿ ಮಿತ್ತೂರು, ಇಬ್ರಾಹಿಂ ಸಅದಿ ಮಾಣಿ, ಹೈದರ್ ಸಖಾಫಿ ಶೇರಾ, ಕೆ.ಬಿ.ಕಾಸಿಂ ಹಾಜಿ ಪರ್ಲೋಟು, ಯೂಸುಫ್ ಸಯೀದ್ ನೇರಳಕಟ್ಟೆ, ಇಬ್ರಾಹಿಂ ಹಾಜಿ ಶೇರಾ, ಹಬೀಬ್ ಶೇರಾ, ಮುಂತಾದ ಹಲವಾರು ಉಲಮಾ ಉಮಾರಾ ಸಾಮಾಜಿಕ ನೇತಾರರು ಭಾಗವಹಿಸಲಿರುವರು ಎಂದು ಸ್ವಾಗತ ಸಮಿತಿಯ ಚೆಯರ್‌ಮೆನ್ ಉಸೈಸ್ ಸಖಾಫಿ ಸೂರ್ಯ, ಕನ್ವೀನರ್ ಆಶಿಕ್ ಅಲ್ ಹಿಕಮಿ ಶೇರಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





