ಜೂ.17: ಆತೂರಿನಲ್ಲಿ ತಖ್‌ವಿಯ ಸದರ್ ಮುಅಲ್ಲಿಂ ಸಂಗಮ
ಆತೂರು, ಜೂ.16: ಡಿಕೆಜೆಎಂಸಿಸಿ ಕೇಂದ್ರ ಸಮಿತಿಯ ನಿರ್ದೇಶನದಂತೆ ನಡೆಸಲ್ಪಡುವ ಸದರ್ ಮುಅಲ್ಲಿಮರ ಸಂಗಮ ತಖ್‌ವಿಯ -2025 ದ.ಕ. ಜಿಲ್ಲಾ ಮಟ್ಟದ ಕಾರ್ಯಕ್ರಮವು ಜೂ.17ರಂದು ಬೆಳಗ್ಗೆ 10ಕ್ಕೆ ಆತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಲಿದೆ.
ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖ ಉಸ್ತಾದ್, ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಬಂಬ್ರಾಣ ಉಸ್ತಾದ್, ಶೈಖುನಾ ತೋಡರ್ ಉಸ್ತಾದ್, ಎಸ್‌ಕೆಜೆಎಂಸಿಸಿ ಕ್ಷೇಮ ನಿಧಿ ಡೆಪ್ಯುಟಿ ಚೇರ್ಮನ್ ಸಯ್ಯದ್ ಒಎಂಎಸ್ ತಂಳ್ ಮೇಲಾಟೂರ್, ಸಯ್ಯದ್ ಜುನೈದ್ ಜಿಫ್ರಿ ತಂಳ್ ಆತೂರು, ಇಬ್ರಾಹಿಂ ಮುಸ್ಲಿಯಾರ್ ತಳಿಪ್ಪರಂಬ್, ಎಸ್‌ಕೆಎಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





