ಫೆ.17-22: ಯೆನೆಪೊಯ ವಿವಿಯಲ್ಲಿ ಅಂತರ್‌ಕಾಲೇಜು ಕ್ರೀಡೆ, ಸಾಂಸ್ಕೃತಿಕ ಉತ್ಸವ

ಮಂಗಳೂರು: ಯೆನೆಪೊಯ ಪರಿಗಣಿತ ವಿವಿ ಆಶ್ರಯದಲ್ಲಿ ಫೆ. 17 ರಿಂದ 22ರ ವರೆಗೆ ಅಖಿಲ ಭಾರತ ಅಂತರ್ ಕಾಲೇಜು ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಅಸ್ತ್ರ -2.0 ಯೆನೆಪೋಯ ವಿವಿಯಲ್ಲಿ ನಡೆಯಲಿದೆ.
ಉತ್ಸವದಲ್ಲಿ ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಥ್ರೋಬಾಲ್ ಕ್ರೀಡೆ ಗಳನ್ನು ಒಳಗೊಂಡಿರುತ್ತದೆ. ಇದು ವಿದ್ಯಾರ್ಥಿ-ಕ್ರೀಡಾಪಟುಗಳಿಗೆ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ವೇದಿಕೆಯನ್ನು ಒದಗಿಸ ಲಿದೆ. ಇದರ ಜೊತೆಗೆ, ಗುಂಪು ಮತ್ತು ಏಕವ್ಯಕ್ತಿ ನೃತ್ಯ,ಫ್ಯಾಶನ್ ಶೋಗಳು, ಸಂಗೀತ ಸ್ಪರ್ಧೆಗಳು, ಮೆಹೆಂದಿ, ಛಾಯಾ ಗ್ರಹಣ ಮತ್ತು ಚರ್ಚೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾಗವಹಿಸುವವರಿಗೆ ತಮ್ಮ ಕಲಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಿದೆ.
ಅಸ್ಸಾಂ, ಜಾರ್ಖಂಡ್, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ತಂಡಗಳು ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ.
ಭಾಗವಹಿಸುವವರು ಈವೆಂಟ್‌ಗೆ ಮೊದಲು ಆನ್‌ಲೈನ್ ನೋಂದಣಿಯನ್ನು ಪೂರ್ಣಗೊಳಿಸಬೇಕು ಮತ್ತು ಎಲ್ಲ ತಂಡಗಳು ಅರ್ಹತೆ ಮತ್ತು ಭಾಗವಹಿಸುವಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯ ಎಂದು ಪ್ರಕಟನೆ ತಿಳಿಸಿದೆ.





