ಜ.18 ರಿಂದ ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ

ಉಳ್ಳಾಲ: ತಲಪಾಡಿ ಬಿಲಾಲ್ ಜುಮಾ ಮಸೀದಿಯಲ್ಲಿ ಮಾಸಿಕ ನಡೆಯುವ ಸ್ವಲಾತ್ ಮಜ್ಲಿಸ್ ನ 21ನೇ ವಾರ್ಷಿಕೋತ್ಸವ ಜ.18 ರಿಂದ 21ರವರೆಗೆ ಮಸೀದಿ ಅಧ್ಯಕ್ಷ ಯಾಕೂಬ್ ಪೂಮಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜ.18 ರಂದು ಕೆ ಪಿ.ಹುಸೈನ್ ಸಅದಿ ಕೆ ಸಿ ರೋಡ್, ಜ.19ರಂದು ಹಂಝ ಮಿಸ್ಬಾಹಿ ಓಟಪದವು, ಜ 20 ರಂದು ಯಸೀರ್ ಸಖಾಫಿ ಅಲ್ ಅಝ್ಹರಿ ಪಂಪ್ವೆಲ್, ಜ. 21ರಂದು ಎಮ್ಮೆಸ್ಸೆಮ್ ಅಬ್ದುಲ್ ರ್ರಶೀದ್ ಸಖಾಫಿ ಝೈನಿ ಖಾಮಿಲ್ ತಲಪಾಡಿ ಪ್ರವಚನ ನೀಡಲಿದ್ದಾರೆ. ಸ್ವಲಾತ್ ಮಜ್ಲಿಸ್ ನೇತೃತ್ವ ದುವಾ ಅಸಯ್ಯದ್ ಶಫೀಉಲ್ಲಾ ಅಲ್ ಐದರೂಸ್ ಪಿ ಎಮ್ ಎಸ್ ತಂಙಲ್ ವಹಿಸಲಿದ್ದು, ಮುನೀರ್ ಸಖಾಫಿ ಕೆ ಸಿ ರೋಡ್, ಹಾಫಿಲ್ ನಝೀರ್ ಅಹ್ಮದ್ ಸಖಾಫಿ. ಎಂ ಪಿ ಇಬ್ರಾಹಿಮ್ ಫೈಝಿ ಉಚ್ಚಿಲ, ಸ್ಪೀಕರ್ ಯು ಟಿ ಖಾದರ್ ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸುವರು ಎಂದು ಮಸೀದಿ ಕಾರ್ಯದರ್ಶಿ ಅಬ್ದುಲ್ ಹಕೀಂ ಪೂಮಣ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





