ಫೆ.18: ಬ್ಯಾರಿ ಸಾಹಿತ್ಯ ಕಾರ್ಯಾಗಾರ-ಕವಿಗೋಷ್ಠಿ
ಮಂಜನಾಡಿ, ಫೆ.16: ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದಮರೊ ಕೂಟ)ದೇರಳಕಟ್ಟೆ ಇದರ ವತಿಯಿಂದ ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಶರಫುಲ್ ಉಲಮಾ ಅಡಿಟೋರಿಯಂನಲ್ಲಿ ಫೆ.18ರಂದು ಸಂಜೆ 4ಕ್ಕೆ ಬ್ಯಾರಿ ಸಾಹಿತ್ಯ ಕಾರ್ಯಾಗಾರ ಮತ್ತು ಕವಿಗೋಷ್ಠಿ ನಡೆಯಲಿದೆ.
ಅಲ್ ಮದೀನಾದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೇಲ್ತೆನೆಯ ಅಧ್ಯಕ್ಷ ವಿ. ಇಬ್ರಾಹೀಂ ನಡುಪದವು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅಲ್ ಮದೀನಾ ದಅವಾ ಕಾಲೇಜಿನ ಪ್ರಾಂಶುಪಾಲ ಸೈಯ್ಯದ್ ಉವೈಸ್ ಅಸ್ಸಖಾಫ್, ಅಬ್ದುಲ್ ರಝಾಕ್ ಮಾಸ್ಟರ್ ನಾವೂರು ಭಾಗವಹಿಸಲಿದ್ದಾರೆ. ಪತ್ರಕರ್ತ ಹಂಝ ಮಲಾರ್ ಸಾಹಿತ್ಯ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಕವಿಗಳಾದ ಮುಆದ್ ಜಿ.ಎಂ., ಅಶೀರುದ್ದೀನ್ ಸಾರ್ತಬೈಲ್, ಎ.ಕೆ.ಮುಡಿಪು, ಸಿ.ಎಂ.ಶರೀಫ್ ಪಟ್ಟೋರಿ, ಅಬೂಬಕರ್ ಎಚ್.ಕಲ್., ಬಿ.ಎಂ.ಕಿನ್ಯ ಕವನ ವಾಚಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





