ಎ.18ರಂದು ನಡೆಯುವ ಪ್ರತಿಭಟನೆಗೆ ಯುನಿವೆಫ್ ಬೆಂಬಲ

ಮಂಗಳೂರು, ಎ.17: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.18ರಂದು ಕರ್ನಾಟಕ ಉಲಮಾ ಕೋರ್ಡಿನೇಶನ್ ಸಮಿತಿ ನಡೆಸುವ ಚಾರಿತ್ರಿಕ ಪ್ರತಿಭಟನೆಗೆ ಯುನಿವೆಫ್ ಕರ್ನಾಟಕ ಸಂಪೂರ್ಣ ಬೆಂಬಲ ಘೋಷಿಸಿದೆ.
ಸಂಘಟನೆಯ ನಾಯಕರು, ಸದಸ್ಯರು, ಕಾರ್ಯಕರ್ತರು ಮತ್ತು ಹಿತೈಷಿಗಳು ಹೆಚ್ವಿನ ಸಂಖ್ಯೆಯಲ್ಲಿ ಹಾಜರಿರುವರು ಎಂದು ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





