ಜೂ.18: ಮಂಗಳೂರು ವಿವಿಯಲ್ಲಿ ಹಿರಿಯ ಚಿಂತಕ ಶಿವಸುಂದರ್ರಿಂದ ವಿಶೇಷ ಉಪನ್ಯಾಸ

(ಶಿವಸುಂದರ್)
ಮಂಗಳೂರು, ಜೂ.17: ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ‘ಮಾಧ್ಯಮದಲ್ಲಿ ಜಾತಿ ಮತ್ತು ಕಾರ್ಪೊರೇಟ್ ಏಕಸ್ವಾಮ್ಯ’ ವಿಷಯದ ಕುರಿತು ಜೂ.18ರಂದು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ವಿವಿಯ ವಿಜ್ಞಾನ ಬ್ಲಾಕ್ನ ಯು.ಆರ್.ರಾವ್ ಸಭಾಂಗಣದಲ್ಲಿ ಅಂದು ಅಪರಾಹ್ನ 2ಕ್ಕೆ ಜರುಗುವ ಕಾರ್ಯಕ್ರಮದಲ್ಲಿ ಖ್ಯಾತ ಪತ್ರಕರ್ತ, ಹಿರಿಯ ಚಿಂತಕ ಶಿವಸುಂದರ್ ಉಪನ್ಯಾಸ ನೀಡಲಿದ್ದಾರೆ.
ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸುವರು. ಕುಲಸಚಿವ ಕೆ.ರಾಜು ಮೊಗವೀರ ಭಾಗವಹಿಸಲಿದ್ದಾರೆ ಎಂದು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಧ್ಯಕ್ಷ ಎಂ.ಪಿ.ಉಮೇಶ್ಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





