ಅ.18-19: ರಾತೀಬ್, ಬುರ್ದಾ ಮಜ್ಲಿಸ್
ಕಾಞಂಗಾಡ್, ಅ.17: ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಮರ್ಹೂಮ್ ಶೈಖುನಾ ಸಿ.ಪಿ. ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರವರು ಪ್ರತ್ಯೇಕ ಇಜಾಝತ್ ಪ್ರಕಾರ ಕಾಞಂಗಾಡ್ ಹಳೆ ಕಡಪುರದ ಗೌಸಿಯಾ ಮಂಝಿಲ್‌ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿದ್ದ ಆಧ್ಯಾತ್ಮಿಕ ಮಜ್ಲಿಸ್ (ರಾತೀಬುಲ್ ಗೌಸಿಯತುಲ್ ಖಾದಿರಿಯ-ಜಲಾಲಿಯ ದಿಕ್ರ್) ಅ.18,19ರಂದು ನಡೆಯಲಿದೆ.
ಅ.18ರಂದು ಮಗ್ರಿಬ್ ನಮಾಜಿನ ನಂತರ ಬುರ್ದಾ ಪ್ರಕೀರ್ತಕ ಹಾಫಿಲ್ ಝೈನುಲ್ ಆಬಿದ್ ಸಖಾಫಿ ಮಂಬುರಂ ನೇತೃತ್ವದ ತಂಡದಿಂದ ಬುರ್ದಾ ಮಜ್ಲಿಸ್ ನಡೆಯಲಿದೆ. ಅ.19ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯುವ ಆಧ್ಯಾತ್ಮಿಕ ಮಜ್ಲಿಸ್‌ನ ನೇತೃತ್ವವನ್ನು ರೂಹುಸ್ಸಾದಾತ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಹೈದ್ರೋಸಿ ಮುತ್ತು ಕೋಯ (ಎಲಂಗೂರು ತಂಙಳ್) ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





