18 ಕ್ಲಬ್ ಚಾಂಪಿಯನ್ಸ್ ಟ್ರೋಫಿ 2025: ಯುನೈಟೆಡ್ ಕಂದಕ್ ತಂಡ ಚಾಂಪಿಯನ್

ಮಂಗಳೂರು : ನಗರದ ಕಂದಕ್ ಪರಿಸರದ ಗಲ್ಲಿ ಕ್ರೀಡಾಂಗಣದಲ್ಲಿ ತಾಹಿರ್ ನೇತೃತ್ವದಲ್ಲಿ '18 ಕ್ಲಬ್ ಚಾಂಪಿಯನ್ಸ್ ಟ್ರೋಫಿ' ರವಿವಾರ ನಡೆಯಿತು.
ಫಯಾಝ್ ನಾಯಕತ್ವದ ಯುನೈಟೆಡ್ ಕಂದಕ್ ತಂಡ, ಅನ್ಸಾಫ್ ನೇತೃತ್ವದ ಟೈಟಾನ್ಸ್ ಕಂದಕ್ ತಂಡದ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಡಿತು.
ಫೈನಲ್ ಪಂದ್ಯಾಕೂಟದಲ್ಲಿ ಆಲ್ರೌಂಡರ್ ಪ್ರದರ್ಶನ ನೀಡಿದ ರಿಲ್ವಾನ್ ಗೆ ಉತ್ತಮ ದಾಂಡಿಗ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ, ಅತೀ ಹೆಚ್ಚು ವಿಕೆಟ್ ದಾರನಾಗಿ ಯುವ ಪ್ರತಿಭೆ ಪ್ರದೀಪ್ ಮತ್ತು ತಂಡಕ್ಕೆ ಬೆನ್ನಲುಬಾಗಿ ಶ್ರಮಿಸಿದ ಜಾಫರ್ ಸಾದಿಕ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಪಂದ್ಯಕೂಟಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಂಡರ್ ಆರ್ಮ್ ಕ್ರಿಕೆಟ್ ನ ಖ್ಯಾತ ಆಟಗಾರ ರಶೀದ್ ಬಾಬಾ ರನ್ನು ಕಂದಕ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಸ್ಥಳೀಯ ಜನಪ್ರತಿನಿಧಿ ಅಬ್ದುಲ್ ಲತೀಫ್, ಉದ್ಯಮಿ ಮುಝಫರ್, ಆಸೀಫ್ ಮತ್ತು ಇವರೊಂದಿಗೆ ಸ್ಥಳೀಯಾರಾದ ಸತ್ತಾರ್ ಕಂದಕ್, ನವಾಝ್ ಕೆ ಎಚ್ ಉಪಸ್ಥಿತರಿ ದ್ದರು. ಶಾಝಿಲ್ ಕಂದಕ್ ಕಾರ್ಯಕ್ರಮದ ನಿರೂಪಣೆ ಮಾಡಿದರು.







