ಜ.19ರಂದು ಮಹಮ್ಮದ್ ರಫಿ ಜನ್ಮ ದಿನದ ಅಂಗವಾಗಿ ರಸಮಂಜರಿ

ಮಂಗಳೂರು, ಜ.16: ಖ್ಯಾತ ಗಾಯಕ ದಿ.ಮಹಮ್ಮದ್ ರಫಿ ಅವರ ಜನ್ಮ ದಿನದ ಅಂಗವಾಗಿ ಮಂಗಳೂರಿನ ಸಂಗೀತ್ ಬಹಾರ್ ಇವೆಂಟ್ಸ್ ವತಿಯಿಂದ ಸಮಾಜ ಸೇವಾ ಯೋಜನೆಯ ರೂಪವಾಗಿ ‘ಯಾದೇಂ’ ರಿಮೆಂಬರಿಂಗ್ ರಫಿ ಎನ್ನುವ ಹಳೆಯ ಸುಮಧುರ ಗೀತೆಗಳ ರಂಸಮಂಜರಿ ಕಾರ್ಯಕ್ರಮ ನಗರದ ಪುರಭವನದಲ್ಲಿ ಜ.19ರಂದು ಸಂಜೆ 5ಕ್ಕೆ ನಡೆಯಲಿದೆ ಎಂದು ಸಂಗೀತ್ ಬಹಾರ್ ಇವೆಂಟ್ಸ್ ಕಾರ್ಯದರ್ಶಿ ರವೀಂದ್ರ ಪ್ರಭು ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು 25 ಕಲಾವಿದರು ಇದರಲ್ಲಿ ಕಾಣಿಸಿಕೊಳ್ಳಲಿದ್ದು, ವಿಶಿಷ್ಟ ಸಾಮರ್ಥ್ಯದ ಮಕ್ಕಳ ಸಹಾಯಾರ್ಥವಾಗಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ. ಪ್ರವೇಶ ಪತ್ರದಲ್ಲಿ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿ ನೀಡುವ ಬಾಕ್ಸ್‌ನಲ್ಲಿ ಹಾಕಿದರೆ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿ ವಿಜೇತರಿಗೆ ಚಿನ್ನ ಹಾಗೂ ಬೆಳ್ಳಿಯ ಉಂಗುರ ಬಹುಮಾನವಾಗಿ ನೀಡಲಾಗುತ್ತದೆ ಎಂದರು.
ಸಂಗೀತ್ ಬಹಾರ್ ಇವೆಂಟ್ಸ್ ಅಧ್ಯಕ್ಷ ರವಿ ದಾಮೋದರ ಪ್ರಭು, ಖಜಾಂಚಿ ಸೀಮಾ ಡಿ ಶೆಣೈ ಹಾಗೂ ಜೂನಿಯರ್ ರಫಿ ಖ್ಯಾತಿಯ ಖಾಲಿದ್ ಅಖ್ತರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





