ಜ.19ರಂದು ’ಸಮಸ್ತ’ದ ಧ್ವಜ ದಿನ
ಮಂಗಳೂರು: ಪ್ರಸಿದ್ಧ ಉಲಮಾ ಸಂಘಟನೆಯಾದ ‘ಸಮಸ್ತ’ ದ 100ನೇ ವಾರ್ಷಿಕ ಉದ್ಘಾಟನಾ ಸಮ್ಮೇಳನವು ಬೆಂಗಳೂರು ಅರಮನೆ ಮೈದಾನದಲ್ಲಿ ಜರಗಲಿದ್ದು, ಆ ಪ್ರಯುಕ್ತ ಜನವರಿ 19 ರಂದು ಧ್ವಜ ದಿನ ಆಚರಿಸಲು ‘ಸಮಸ್ತ’ ದ ಕೇಂದ್ರೀಯ ಘಟಕ ಕರೆ ನೀಡಿದೆ.
ಪ್ರತಿ ಮೊಹಲ್ಲಾ ಗಳಲ್ಲೂ ಧ್ವಜದಿನ ಆಚರಿಸಿ, ಸಮುದಾಯದ ಅಗಲಿದ ಹಿರಿಯರಿಗಾಗಿ ಖಬರ್ ಝಿಯಾರತ್ ನಡೆಸುವುದು, ವಿಶೇಷ ಪ್ರಾರ್ಥನೆ ಸಂಗಮ ನಡೆಸುವುದು ಮೊದಲಾದ ಕಾರ್ಯಕ್ರಮ ನಡೆಸಲಾಗುವುದು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕರ್ನಾಟಕ ಮುಶಾವರ ವತಿಯಿಂದ ಜಿಲ್ಲಾ ಮಟ್ಟದ ಧ್ವಜದಿನ ಕಾರ್ಯಕ್ರಮವು ನಂದಾವರ ಜುಮ್ಮಾ ಮಸೀದಿ ವಠಾರದಲ್ಲಿ ಉಲಮಾ ,ಉಮರಾ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ಜನವರಿ 21 ರಂದು ಪ್ರತಿ ಮದ್ರಸಗಳಲ್ಲೂ ವಿದ್ಯಾರ್ಥಿಗಳ ಅಸೆಂಬ್ಲಿ ನಡೆಸಿ ಪ್ರಚಾರ ಕಾರ್ಯಕ್ರಮ ನಡೆಸಲಾಗುವುದು.
ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ದ.ಕ.ಜಲ್ಲಾ ’ಸಮಸ್ತ’ ಶತಮಾನೋತ್ಸವ ಸ್ವಾಗತ ಸಮಿತಿ ನಾಯಕರು, ‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರೂ ಆಗಿರುವ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮತ್ತು ಉಸ್ಮಾನುಲ್ ಫೈಝಿ ತೋಡಾರ್ ತಿಳಿಸಿರುವುದಾಗಿ ಸ್ವಾಗತ ಸಮಿತಿ ಮಾಧ್ಯಮ ವಿಭಾಗದ ಅಧ್ಯಕ್ಷ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ ತಿಳಿಸಿದ್ದಾರೆ.
ಜನರಲ್ ಕನ್ವೀನರ್ ಕೆ.ಎಂ.ಎ.ಕೊಡುಂಗಾಯಿ, ವರ್ಕಿಂಗ್ ಕನ್ವೀನರ್ ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ.







