ಅ.19: ಮೀಫ್ ಫಲಾನುಭವಿ ವಿದ್ಯಾರ್ಥಿಗಳ ಮತ್ತು ಪ್ರಾಯೋಜಕರ ಸಮಾವೇಶ

ಮಂಗಳೂರು, ಅ.15: ಮೀಫ್ ವತಿಯಿಂದ ಉಚಿತ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳ ಮತ್ತು ಸೀಟುಗಳನ್ನು ಒದಗಿಸಿದ ವಿದ್ಯಾ ಸಂಸ್ಥೆಗಳ ಪ್ರಾಯೋಜಕರ ಸಮಾವೇಶವು ಅ.19ರಂದು ಕೂಳೂರಿನಲ್ಲಿರುವ ಯೆನೆಪೊಯ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಮಿಷನ್ ಎಂ ಪವರ್ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ಜಿಲ್ಲೆಗಳ 488 ವಿದ್ಯಾರ್ಥಿಗಳು ಉಚಿತ ಸೀಟುಗಳ ಪ್ರಯೋಜನ ಪಡೆದಿದ್ದಾರೆ. ಹಾಗಾಗಿ ಫಲಾನುಭವಿ ವಿದ್ಯಾರ್ಥಿಗಳು ಮತ್ತು ಪ್ರಾಯೋಜಕರ ನಡುವಿನ ಸಂವಾದ ಹಾಗೂ ಮುಂದಿನ ಉನ್ನತ ಶಿಕ್ಷಣಕ್ಕೆ ಅವಶ್ಯಕ ಮಾಹಿತಿಗಳನ್ನು ನೀಡಲಾಗುವುದು. ಈ ಸಮಾವೇಶವು ಮೀಫ್ ಉಚಿತ ಸೀಟು ಪಡೆದ ಫಲಾನುಭವಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ಸಮಾವೇಶದ ನೋಂದಣಿಯು ಪೂ.9ಕ್ಕೆ ಆರಂಭವಾಗಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಕ್ಲಪ್ತ ಸಮಯಕ್ಕೆ ಆಗಮಿಸಿ ಸಮಾವೇಶದ ಪ್ರಯೋಜನೆ ಪಡೆಯುವಂತೆ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





