ಜೂ.2: ಮಂಗಳೂರಿನಲ್ಲಿ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ

ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲ್‌ನಲ್ಲಿ ಸಂಘ ಪರಿವಾರದ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ಹಾಗೂ ಕೊಲೆಯತ್ನಕ್ಕೊಳಗಾದ ಕಲಂದರ್ ಶಾಫಿ ಮತ್ತು ಕುಡುಪು ಗುಂಪು ಹತ್ಯೆಯಾದ ಅಶ್ರಫ್ ಪ್ರಕರಣವನ್ನು ಖಂಡಿಸಿ ಹಾಗೂ ಜಿಲ್ಲೆಯ ಸೌಹಾರ್ದಕ್ಕೆ ಮಾರಕವಾದ ಘಟನೆಗಳಿಗೆ ಕಾರಣವಾದ ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯ ಜೂ.2ರಂದು ಅಪರಾಹ್ನ 3ಕ್ಕೆ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಯಲಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





