ನ.2-3: ಹರ್ಷ ದೀಪಾವಳಿ ಬಜಾರ್‌ನಲ್ಲಿ ಆಕರ್ಷಕ ಕೊಡುಗೆ

ಮಂಗಳೂರು, ನ.1: ಗೃಹೋಪಕರಣಗಳ ಪ್ರಸಿದ್ಧ ಮಳಿಗೆ ಹರ್ಷದಲ್ಲಿ ದೀಪಾವಳಿಯ ವೈಭವದ ಸಂಭ್ರಮಾಚರಣೆ ಗಾಗಿ ಆರಂಭಗೊಂಡಿರುವ ‘ಹರ್ಷ ದೀಪಾವಳಿ ಬಜಾರ್’ನಲ್ಲಿ ಆಕರ್ಷಕ ಕೊಡುಗೆಯು ನವಂಬರ್ 2 ಮತ್ತು 3ರಂದು ಕೊನೆಗೊಳ್ಳಲಿದೆ.
ನವನವೀನ ಮಾದರಿಯ ಡಿಜಿಟಲ್ ತಂತ್ರಜ್ಞಾನದ ಎಲ್‌ಇಡಿಟಿಗಳು, ಫ್ರಾಸ್ಟ್ ಪ್ರೀ ರೆಫ್ರಿಜರೇಟರ್‌ಗಳು ಫುಲ್ಲೀ ಅಟೊಮೆಟಿಕ್ ವಾಶಿಂಗ್ ಮೆಶಿನ್‌ಗಳು, ಕೈಗೆಟಕುವ ದರದಲ್ಲಿ ಉನ್ನತ ತಂತ್ರಜ್ಞಾನದ ವಿದ್ಯುತ್ ಉಳಿಸುವ ಸ್ಟಾರ್ ರೇಟೆಡ್ ಸ್ಪ್ಲಿಟ್ ಏರ್ ಕಂಡೀಶನರ್‌ಗಳು, ಮೈಕ್ರೋವೇವ್ ಅವನ್‌ಗಳು, ಜಗತ್ಪ್ರಸಿದ್ಧ ಬ್ರ್ಯಾಂಡ್‌ಗಳ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್‌ಗಳು, ನವ-ನವೀನ ಮಾದರಿಯ ಮಿಕ್ಸರ್, ಗ್ರೈಂಡರ್, ಫ್ಯಾನ್, ಕೂಲರ್ಸ್‌ಗಳು, ಅತ್ಯಾಧುನಿಕ ಪರ್ಸನಲ್, ಹೆಲ್ತ್‌ಕೇರ್ ಹಾಗೂ ಬ್ಯೂಟಿಕೇರ್ ಉತ್ಪನ್ನಗಳಲ್ಲದೆ ಇನ್ನಿತರ ಗೃಹೋಪಯೋಗಿ ವಸ್ತುಗಳು ಹಲವಾರು ಕೊಡುಗೆಗಳೊಂದಿಗೆ ಗ್ರಾಹಕರ ಮನಸೆಳೆಯಲಿವೆ.
ವಿಶ್ವ ಖ್ಯಾತ ಬ್ರ್ಯಾಂಡ್‌ಗಳ ಉತ್ಕೃಷ್ಟ ವಸ್ತು ವೈವಿಧ್ಯಗಳ ಶಾಲ ಶ್ರೇಣಿಯೇ ಹರ್ಷದಲ್ಲಿದೆ. ಗ್ರಾಹಕರಿಗೆ ಒಂದೇ ಸೂರಿನಡಿ ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಮನೋರಂಜನೆಯ ವಿಶೇಷ ಅನುಭವಕ್ಕಾಗಿ 100 ಇಂಚಿನ ಸೂಪರ್ ಸೈಜ್ ಎಲ್‌ಇಡಿ ಟಿವಿಯನ್ನು ಕೇವಲ 2,71,999ಕ್ಕೆ ಖರೀದಿಸಿ. 85 ಎಲ್‌ಇಡಿ ಟಿವಿ 1,45,990, 75 ಎಲ್‌ಇಡಿ ಟಿವಿ 70,999, 65 ಎಲ್‌ಇಡಿ ಟಿವಿ 50,990 ಹಾಗೂ 55 ಎಲ್‌ಇಡಿ ಟಿವಿ 37,999ಕ್ಕೆ ತಮ್ಮದಾಗಿಸಬಹುದು. ದೊಡ್ಡ ಸೈಜ್‌ನ ಸೈಡ್-ಬೈ-ಸೈಡ್, ಫ್ರಾಸ್ಟ್ ಫ್ರೀ ರೆಫ್ರಿಜರೇಟರ್‌ಗಳ ಮೇಲೆ 25,000 ರೂ. ವರೆಗೆ ಕ್ಯಾಶ್‌ಬ್ಯಾಕ್, 10,000 ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಹಾಗೂ ಕಾಂಬಿ ಕೊಡುಗೆಯಾಗಿ 15,990ರ ಏರ್ ಪ್ರೈಯರನ್ನು ಕೇವಲ 5,999ಕ್ಕೆ ಮನೆಗೊಯ್ಯ ಬಹುದು. ಹೊಸ ತಂತ್ರಜ್ಞ್ಞನದ ವಾಶರ್ ಕಮ್ ಶೇ.100 ಡ್ರೈಯರ್, ಫ್ರಂಟ್ ಲೋಡ್, ಟಾಪ್ ಲೋಡ್ ವಾಶಿಂಗ್ ಮಶಿನ್ ಖರೀದಿಯೊಂದಿಗೆ ಶೇ.20ವರೆಗೆ ಕ್ಯಾಶ್‌ಬ್ಯಾಕ್, 5,000 ರೂ.ವರೆಗೆ ಎಕ್ಸ್‌ಚೇಂಜ್ ಬೋನಸ್ ಪಡೆಯ ಬಹುದು. ಪಾತ್ರೆ ತೊಳೆಯುವ ಚಿಂತೆ ದೂರವಾಗಿಸುವ ಡಿಶ್‌ವಾಶರ್ 2,000 ರೂ. ಇಎಮ್‌ಐನಲ್ಲಿ ಖರೀದಿಸ ಬಹುದು. ಜೊತೆಗೆ 10,000 ರೂ. ವರೆಗೆ ಕ್ಯಾಶ್‌ಬ್ಯಾಕ್, ಕಾಂಬಿ ಕೊಡುಗೆಯಾಗಿ 8,500ರ ಮೈಕ್ರೋವೇವ್ ಅವನ್ ಕೇವಲ 5,499ಕ್ಕೆ ಪಡೆಯಬಹುದು.
ವಿಶೇಷ ತಿಂಡಿ-ತಿನಿಸುಗಳನ್ನು ತಯಾರಿಸಲು 3,000 ರೂ.ವರೆಗಿನ ಕ್ಯಾಶ್‌ಬ್ಯಾಕ್ ಹಾಗೂ 2,000 ರೂ.ವರೆಗಿನ ಎಕ್ಸ್‌ಚೇಂಜ್ ಬೋನಸ್‌ನೊಂದಿಗೆ ಮೈಕ್ರೋವೇವ್ ಓವನ್ ಖರೀದಿಸಬಹುದು.
ಸ್ಮಾರ್ಟ್ ಕಿಚನ್‌ಗಾಗಿ ವಿಶಾಲ ಶ್ರೇಣಿಯ ಮಿಕ್ಸರ್, ಗ್ರೈಂಡರ್, ರೋಬೋ ವ್ಯಾಕ್ಯೂಮ್ ಕ್ಲೀನರ್, ಕುಕ್‌ವೇರ್ ಸೆಟ್, ಫ್ರೆಶರ್ ಕುಕ್ಕರ್, ಫ್ಯಾನ್, ಕೂಲರ್, ಐರನ್ ಬಾಕ್ಸ್, ಕೆಟಲ್, ಓಟಿಜಿ, ಗ್ಯಾಸ್ ಸ್ಟವ್, ಹಾಬ್, ಚಿಮ್ನಿ ಹೀಗೆ ಹಲವು ಅಡುಗೆಯ ಸಾಧನಗಳು ಹಾಗೂ ಇಲೆಕ್ಟ್ರಿಕ್ ಉಪಕರಣಗಳನ್ನು ಹಬ್ಬದ ಕೊಡುಗೆಯೊಂದಿಗೆ ಖರೀದಿಸಬಹುದು. ಜೊತೆಗೆ ಟ್ರೆಂಡಿಂಗ್‌ನಲ್ಲಿರುವ ಸ್ಮಾರ್ಟ್ ಫೋನ್. ಲ್ಯಾಪ್‌ಟಾಪ್, ಸ್ಪೀಕರ್ಸ್, ವಿವಿಧ ಆಕ್ಸಸರೀಸ್ ಹೀಗೆ ಎಲ್ಲಾ ಬಗೆಯ ಡಿಜಿಟಲ್ ಉಪಕರಣಗಳೂ ಸಹ ಲಭ್ಯವಿದೆ.
ಇಎಮ್‌ಐ, ಕ್ಯಾಶ್‌ಬ್ಯಾಕ್, ಕಾಂಬಿ ಕೊಡುಗೆ, ವಿನಿಮಯ ಕೊಡುಗೆ, ವಿಶೇಷ ಬೆಲೆ, ಆಕರ್ಷಕ ಉಡುಗೊರೆ ಸಹಿತ ‘ಹರ್ಷ ದೀಪಾವಳಿ ಬಜಾರ್’ ನ ಹಲವು ಖರೀದಿ ಯೋಜನೆಗಳು ನ.3ಕ್ಕೆ ಕೊನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.







