ಅ.20: ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್‌ಗೆ ಎಪಿ ಉಸ್ತಾದ್ ಆಗಮನ

ವಿಟ್ಲ: ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸುರಿಬೈಲ್, ಬಂಟ್ವಾಳ ಇದರ ಶಿಲ್ಪಿ ಮರ್ಹೂಮ್ ಶೈಖುನಾ ಸುರಿಬೈಲ್ ಉಸ್ತಾದ್ 24 ನೇ ಆಂಡ್ ನೇರ್ಚೆ ಮತ್ತು ಅಶ್-ಅರಿಯ್ಯ ಸನದುದಾನದ ಪ್ರಯುಕ್ತ ಸುರಿಬೈಲು ಸಂಸ್ಥೆಗೆ ಅ.20 ರಂದು ಸುಲ್ತಾನುಲ್ ಉಲಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಸಂಚಾಲಕ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಮತ್ತು ಜನರಲ್ ಮ್ಯಾನೇಜರ್ ಸಿ.ಎಚ್ ಮುಹಮ್ಮದಲಿ ಸಖಾಫಿ ತಿಳಿಸಿದರು.
ಸಂಸ್ಥೆಯಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು ಅ. 18 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. 20 ರಂದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಸ್ಥಾನ ವಸ್ತ್ರ ವಿತರಣೆ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಸಂಸ್ಥೆಯ ಅಧ್ಯಕ್ಷ ವಾಲೆಮುಂಡೋವ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಲಿದ್ದಾರೆ. ಸನದುದಾನ ಮತ್ತು ಸನದುದಾನ ಪ್ರಭಾಷಣಕ್ಕೆ ಇಂಡಿಯನ್ ಗ್ರಾಂಡ್ ಮುಪ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೇತೃತ್ವ ನೀಡಲಿದ್ದೂ ನೂರಾರು ಉಲಮಾ, ಉಮರಾ, ಸಾದಾತ್ ನಾಯಕರು ಭಾಗಿಯಾಗುವ ಸಮಾರಂಭದಲ್ಲಿ ಮೌಲಾನಾ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಸ್ವಾಗತ ಸಮಿತಿ ಚಯರ್ ಮ್ಯಾನ್ ಹಾಜಿ ಎನ್ ಸುಲೈಮಾನ್ ಸಿಂಗಾರಿ, ಆಡಳಿತ ಸಮಿತಿ ಪದಾಧಿಕಾರಿ ಅಬ್ದುಲ್ ರಶೀದ್ ಹನೀಫಿ, ದಾರುಲ್ ಅಶ್ ಅರಿಯ್ಯ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹಮ್ಮದ್ ಶಫೀಕ್ ಉಪಸ್ಥಿತರಿದ್ದರು.





