ಅ.20-21: ಜಾಮಿಯಾ ಸಅದಿಯಾ ಸನದುದಾನ ಸಮ್ಮೇಳನ

ಕಾಸರಗೋಡು, ಅ.17: ದೇಳಿಯಲ್ಲಿರುವ ಜಾಮಿಯಾ ಸಅದಿಯಾದ ಸನದುದಾನ ಸಮ್ಮೇಳನ ಮತ್ತು ತಾಜುಲ್ ಉಲಮಾ ಉಳ್ಳಾಲ ತಂಙಳ್ ಹಾಗೂ ನೂರುಲ್ ಉಲಮಾ ಎಂ.ಎ.ಅಬ್ದುಲ್ ಖಾದಿರ್ ಮುಸ್ಲಿಯಾರ್‌ರ ಆಂಡ್ ನೇರ್ಚೆಯು ಅ.20,21ರಂದು ನಡೆಯಲಿದೆ.
ಆಂಡ್ ನೆರ್ಚೆಯ ಅಂಗವಾಗಿ ಅ.18ರಂದು ಸಂಜೆ 4ಕ್ಕೆ ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖ್ಬರದಲ್ಲಿ ಆಧ್ಯಾತ್ಮಿಕ ಸಭೆಯು ಮುಹಮ್ಮದ್ ಸ್ವಾಲಿಹ್ ಸಅದಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಅದಿಯಾ ಹಿರಿಯ ಉಪಾಧ್ಯಕ್ಷ ಕೆ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅ.19ರಂದು ಮಧ್ಯಾಹ್ನ 2ಕ್ಕೆ ಸಈದ್ ಮುಸ್ಲಿಯಾರ್, ಕೆ.ವಿ. ಮೊಯಿದಿನ್ ಮುಸ್ಲಿಯಾರ್, ಎಂ.ಎ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಅವರ ಮಖ್ಬರ ಝಿಯಾರತ್ ನಡೆಯಲಿದೆ. ಸಂಜೆ 4:30ಕ್ಕೆ ನೂರುಲ್ ಉಲಮಾ ಎಂ.ಎ. ಉಸ್ತಾದ್, ಕಲ್ಲಟ್ರ ಅಬ್ದುಲ್ ಖಾದಿರ್ ಹಾಜಿ ಮಕ್ಬರ ಝಿಯಾರತ್‌ಗೆ ಸಯ್ಯಿದ್ ಇಬ್ರಾಹೀಂ ಪೂಕ್ಕುಂಞಿ ತಂಙಳ್ ಅಲ್ ಹೈದ್ರೂಸಿ ನೇತೃತ್ವ ವಹಿಸಲಿದ್ದಾರೆ. ಸಅದಿಯಾ ಕೇಂದ್ರ ಸಮಿತಿಯ ಕಾರ್ಯದರ್ಶಿ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ಅಲ್ ಅಹ್ದಲ್ ಧ್ವಜಾರೋಹಣ ನಡೆಸಲಿದ್ದಾರೆ.
ಅ.20ರಂದು ಬೆಳಗ್ಗೆ 9ಕ್ಕೆ ಸ್ವಾಗತ ಸಮಿತಿಯ ಅಧ್ಯಕ್ಷ ಸಯ್ಯಿದ್ ಪಿ.ಎಸ್. ಆಟಕ್ಕೋಯ ತಂಳ್ ಬಾಹಸನ್ ಪಂಜಿಕ್ಕಲ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಹಜ್ ಸಚಿವ ರಹೀಮ್ ಖಾನ್ ಉದ್ಘಾಟಿಸಲಿ ದ್ದಾರೆ. ಸಯ್ಯಿದ್ ಮುಹಮ್ಮದ್ ಅಶ್ರಫ್ ತಂಳ್ (ಆದೂರು) ದುಆಗೈಯಲಿದ್ದಾರೆ. ಸಮಸ್ತ ಶತಮಾನೋತ್ಸವದ ಅಂಗವಾಗಿ ಬೆಳಗ್ಗೆ 10ಕ್ಕೆ ನಡೆಯುವ ಜಿಲ್ಲಾ ಮುಅಲ್ಲಿಂ (ಶಿಕ್ಷಕರ) ಸಮ್ಮೇಳನವನ್ನು ಸಯ್ಯಿದ್ ಕೆ.ಎಸ್. ಆಟಕ್ಕೋಯ ತಂಙಳ್ ಕುಂಬೋಳ್ ಉದ್ಘಾಟಿಸಲಿದ್ದಾರೆ. ಅಬ್ದುಲ್ ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ನಡೆಯುವ ಸಾಂಸ್ಕೃತಿಕ ಸಭೆಯನ್ನು ಸಂಸದ ರಾಜ್‌ಮೋಹನ್ ಉನ್ನಿತಾನ್ ಉದ್ಘಾಟಿಸಲಿದ್ದಾರೆ.
ಅ.21ರಂದು ಬೆಳಗ್ಗೆ 9ಕ್ಕೆ ಸಅದಿ ವಿದ್ವಾಂಸರ ಸಮಾವೇಶ, 11ಕ್ಕೆ ಪ್ರವಾಸಿ ಸಂಗಮ, ಮಧ್ಯಾಹ್ನ 1ಕ್ಕೆ ಹಳೆಯ ವಿದ್ಯಾರ್ಥಿಗಳ ಸಭೆ, ಸಂಜೆ 4:30ಕ್ಕೆ ಖತಮುಲ್ ಕುರಾನ್ ಮಜ್ಲಿಸ್ ನಡೆಯಲಿದೆ. ಸಂಜೆ 5ಕ್ಕೆ ಸನದುದಾನ ನಡೆಯಲಿದೆ. ಸೈಯದ್ ಅಲಿ ಬಾಫಕಿ ತಂಳ್ ದುಆಗೈಯುವರು. ಸಅದಿಯ್ಯಾದ ಅಧ್ಯಕ್ಷ ಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಅಧ್ಯಕ್ಷತೆ ವಹಿಸುವರು. ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಸೈಯದ್ ಇಬ್ರಾಹಿಮುಲ್ ಖಲೀಲ್ ಅಲ್-ಬುಖಾರಿ ಅನುಸ್ಮರಣ ಪ್ರಭಾಷಣ ಮಾಡಲಿದ್ದಾರೆ. ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಸನದುದಾನ ಭಾಷಣ ಮಾಡಲಿದ್ದಾರೆ. ಪೆರೋಡ್ ಅಬ್ದುರ‌್ರಹ್ಮಾನ್ ಸಖಾಫಿ, ಸೈಯದ್ ಹಮೀದ್ ಇಂಬಿಚ್ಚಿಕೋಯ ಅಲ್ಬುಖಾರಿ, ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಯೆನೆಪೊಯ ಅಬ್ದುಲ್ಲ ಕುಂಞಿ, ಡಾ.ಯು.ಟಿ. ಇಫ್ತಿಕಾರ್ ಫರೀದ್, ಇನಾಯತ್ ಅಲಿ ಮಂಗಳೂರು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







