ಎ.20-26: ಪಳ್ಳಿತ್ತಡ್ಕ ದರ್ಗಾ ಶರೀಫ್ ಮಖಾಂ ಉರೂಸ್

ಪುತ್ತೂರು: ಇರ್ದೆ ಪಳ್ಳಿತ್ತಡ್ಕ ಉರೂಸ್ ಸಮಾರಂಭವು ಎ. 20ರಿಂದ 26ರ ತನಕ ಧಾರ್ಮಿಕ ಮತ ಪ್ರಭಾಷಣಗಳೊಂದಿಗೆ ಅಸ್ಸಯ್ಯದ್ ಕೆ. ಎಸ್. ಆಟಕೋಯ ತಂಙಳ್ ಕುಂಬೋಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕೊರಿಂಗಿಲ ಜುಮಾ ಮಸೀದಿ ಉಪಾಧ್ಯಕ್ಷ ಆಲಿಕುಂಞಿ ಹಾಜಿ ಕೊರಿಂಗಿಲ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಎ.20ರಂದು ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಅವರ ದುಃವಾ ನೆರವೇರಿಸಲಿದ್ದಾರೆ. ಕೊರಿಂಗಿಲ ಮಸೀದಿ ಖತೀಬ್ ಅಲ್‌ಹಾಜ್ ಜಿ.ಎಚ್. ಅಯ್ಯೂಬ್ ವಹಬಿ ಗಡಿಯಾರ ಉದ್ಘಾಟಿಸಲಿದ್ದಾರೆ. ಫಾರೂಕ್ ನಯೀಮಿ ಕೊಲ್ಲಂ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಎ.21ರಂದು ಅಬೂರಬೀಹ್ ಸ್ವದಕತುಲ್ಲ ಬಾಖವಿ ಕೊಲ್ಲಂ, ಎ.22ರಂದು ಸಿ.ಕೆ. ರಾಶಿದ್ ಬುಖಾರಿ ಕುಟ್ಯಾಡಿ , ಎ.23ರಂದು ಅಲ್ ಹಾಫಿಲ್ ಮಾಹಿನ್ ಮನ್ನಾನಿ, ಎ.24ರಂದು ಜಬ್ಬಾರ್ ಸಖಾಫಿ ಪಾತೂರ್, ಎ.25ರಂದು ಶುಹೈಬುಲ್ ಹೈತಮಿ ವಯನಾಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಎ.26ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಸಂಜೆ ಅಲ್‌ಹಾಜ್ ಜಿ.ಎಚ್. ಅಯ್ಯೂಬ್ ವಹಬಿ ನೇತೃತ್ವದಲ್ಲಿ `ಮೌಲೂದು ಪಾರಾಯಣ' ನಡೆಯಲಿದೆ. ರಾತ್ರಿ `ಸೌಹಾರ್ದ ಸಂಗಮʼ ನಡೆಯಲಿದ್ದು, ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.