ಆ.21- 23: ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ಅಂತರ್‌ರಾಷ್ಟ್ರೀಯ ಸಮ್ಮೇಳನ, ಹಳೆ ವಿದ್ಯಾರ್ಥಿಗಳ ಶೃಂಗಸಭೆ

ಮಂಗಳೂರು: ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆ , ನಿಟ್ಟೆ ಡೀಮ್ಡ್ ವಿವಿ ವತಿಯಿಂದ ಆ.21ರಿಂದ 23ರ ವರೆಗೆ ಮಂಗಳೂರು ಕ್ಯಾಂಪಸ್‌ನಲ್ಲಿ ಅಂತರ್‌ರಾಷ್ಟ್ರೀಯ ಸಮ್ಮೇಳನ ಮತ್ತು ಹಳೆ ವಿದ್ಯಾರ್ಥಿಗಳ ಶೃಂಗಸಭೆಯನ್ನು ಆಯೋಜಿಸಲಾಗಿದೆ ಎಂದು ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ.ಮಿತ್ರಾ ಎನ್.ಹೆಗ್ಡೆ ತಿಳಿಸಿದ್ದಾರೆ
ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೃಂಗಸಭೆಯಲ್ಲಿ 50 ಮಂದಿ ವಿದೇಶಿ ಪ್ರತಿನಿಧಿಗಳ ಸಹಿತ 1050 ಮಂದಿ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವರು. ದೇಶ -ವಿದೇಶಗಳ ಅಕಾಡೆಮಿಕ್ ತಜ್ಞರು, ವೈದ್ಯರು, ಸಂಶೋಧಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಗಳು, ಭಾಗವಹಿಸಲಿದ್ದಾರೆ ಎಂದರು.
ಹಳೆ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ 250 ಮಂದಿ ಹಳೆಯ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಗುವುದು. 40 ವಾಯ್ಸ್ ಆಫ್ ಇಂಪ್ಯಾಕ್ಟ್ ವಿಭಾಗದಲ್ಲಿ ದಂತಚಿಕಿತ್ಸೆ, ಸಂಶೋಧನೆ, ಶಿಕ್ಷಣ, ಆರೋಗ್ಯ ನೀತಿ ಮತ್ತು ಸಮಾಜಸೇವೆಯಲ್ಲಿ ಪ್ರಮುಖ ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿಗಳ ಪ್ರೇರಣಾದಾಯಕ ಪಯಣಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದರು.
ಸಮಾರಂಭದಲ್ಲಿ ಆ.22ರಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಎಂ.ಎಸ್.ರವಿ, ಪ್ರಮುಖರಾದ ಡಾ.ಶಿಶಿರ್ ಶೆಟ್ಟಿ, ಡಾ.ರಾಹುಲ್ ಭಂಡಾರಿ, ಡಾ.ಪ್ರೀತೇಶ್ ಶೆಟ್ಟಿ ಉಪಸ್ಥಿತರಿದ್ದರು.







