ಫೆ.22ರಿಂದ ಓಲೆಮುಂಡೋವು ದರ್ಗಾ ಶರೀಫ್ ಉರೂಸ್ ಸಮಾರಂಭ

ಪುತ್ತೂರು: ಓಲೆಮುಂಡೋವು ದರ್ಗಾ ಶರೀಫ್‍ನಲ್ಲಿ 3 ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಉರೂಸ್ ಸಮಾರಂಭವು ಫೆ. 22ರಿಂದ ಮಾ. 3ರ ತನಕ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಉರೂಸ್ ಸ್ವಾಗತ ಸಮಿತಿ ಸದಸ್ಯ ಖಲಂದರ್ ಶಾಫಿ ಎರಬೈಲ್ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಫೆ. 16ರಂದು ಧ್ವಜಾರೋಹಣ ನಡೆಸಲಿದ್ದಾರೆ. ಫೆ. 22ರಂದು ಪೇರೋಡ್ ಮಹಮ್ಮದ್ ಅಝ್ಹರಿ, ಫೆ. 23ರಂದು ಅಬ್ದುಲ್ ರಝಾಕ್ ಅಬ್‍ರಾರಿ ಮತ ಪ್ರವಚನ ನೀಡಲಿದ್ದಾರೆ. ಫೆ. 24 ಮಹಮೂದುಲ್ ಫೈಝಿ ಓಲೆ ಮುಂಡೋವು ದುವಾಶೀರ್ವಚನ ನೀಡಲಿದ್ದು, ರಫೀಕ್ ಸಅದಿ ದೇಲಂಪಾಡಿ ನೀಡಲಿದ್ದಾರೆ. ಫೆ. 25ರಂದು ವಲೀಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಅಧ್ಯಾತ್ಮಿಕ ಮಜ್ಲೀಸ್ ನಡೆಯಲಿದೆ. ಫೆ. 26ರಂದು ನೌಫಲ್ ಸಖಾಫಿ ಕಳಸ ಧಾರ್ಮಿ ಪ್ರವಚನ ನೀಡಲಿದ್ದಾರೆ. ಫೆ. 27ರಂದು ಅಸ್ಸಯ್ಯದ್ ಬುರ್ಹಾನ್ ತಂಙಳ್ ಅಲ್ ಬುಖಾರಿ ದುವಾಶೀರ್ವಚನ ನೀಡಲಿದ್ದಾರೆ. ಅನ್ವರ್ ಮುಹಿಯುದ್ದೀನ್ ಹುದವಿ ಪ್ರಭಾಷಣ ನೀಡಲಿದ್ದಾರೆ. ಫೆ.28ರಂದು ಅಸ್ಸಯ್ಯದ್ ಹಾದೀ ತಂಙಳ್ ಮೊಗ್ರಾಲ್ ದುವಾಶೀರ್ವಚನ ನೀಡಲಿದ್ದಾರೆ. ಶಮೀರ್ ದಾರಿಮಿ ಕೊಲ್ಲಂ ಪ್ರಭಾಷಣ ನೀಡಲಿದ್ದಾರೆ. ಫೆ. 29ರಂದು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ಅನ್ವರ್ ಅಲೀ ಹುದವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾ.1ರಂದು ಖಲೀಲ್ ಹುದವಿ ಕಾಸರಗೋಡು, ಮಾ. 2ರಂದು ಎ.ಎಂ. ನೌಶಾದ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುವಾ ನೇತೃತ್ವ ವಹಿಸಲಿದ್ದಾರೆ.
ಫೆ.22ರಂದು ಸ್ವಲಾತ್ ಮಜ್ಲಿಸ್, ಫೆ.24ರಂದು ಹಲ್ಕಾ ಧ್ಸಿಕ್ರ್, ಫೆ. 25ರಂದು ನೂರೇ ಅಜ್ಮೀರ್, ಫೆ.26ರಂದು ಮಜ್ಲಿಸುನ್ನೂರು ಕಾರ್ಯಕ್ರಮ ನಡೆಯಲಿದೆ. ಮಾ.3ರಂದು ಬೆಳಗ್ಗೆ ಖತಮುಲ್ ಖುರ್‍ಆನ್, ಮೌಲೀದ್ ಮಜ್ಲಿಸ್ ಮತ್ತು ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆ ಮುಂಡೋವು ಮತ್ತು ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುವಾಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲು, ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಉರೂಸ್ ಕಮಿಟಿ ಕಾರ್ಯದರ್ಶಿ ಹಂಝ ಎಲಿಯ ಮತ್ತು ಉಮ್ಮರ್ ಮುಸ್ಲಿಯಾರ್ ಸಾಗು ಉಪಸ್ಥಿತರಿದ್ದರು.







